ಜೂನ್ 23, 2009

ನುಡಿ ಮುತ್ತುಗಳು - ೧

ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು.
— ವಿನೋಬಾ ಭಾವೆ

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
— ಶಂಕರಾಚಾರ್ಯರು

"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "

ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
— ಶಂಕರಾಚಾರ್ಯರು

ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||
— ಡಿ ವಿ ಜಿ

5 ಕಾಮೆಂಟ್‌ಗಳು:

 1. hi nimma e kelasavannu tumba mechide.. kuvempu avara kavithegalannu sangraha maadiddare dayavittu post maadi athava email maadi rajcharan222@gmail.com dhanyavaadagalu

  ಪ್ರತ್ಯುತ್ತರಅಳಿಸು
 2. ನಿಮಗೆ ಅಭಿನಂದನೆಗಳು. ನೀವು ಕನ್ನಡದ ಒಳ್ಳೆಯ ಕೆಲಸವನ್ನು ನೀತಿ ಮಾರ್ಗದಲ್ಲಿ ಮಾಡುತ್ತಿರುವಿರಿ.ಸೋಮಾರಿಗಳು ಮತ್ತು ಮುಗ್ಧರು ಸನ್ನಡತೆಗಳನ್ನು ಓದಿ ಕಲಿಯಲು ಸಹಕಾರ ಮಾಡಿದ್ದೀರಿ. ನೀವು ಬಲಿತವರ ಮಾಸ್ತರರೇ ಸರಿ.
  ನಿಮ್ಮ ವಿಶ್ವಾಸಿ,
  ಶಿವಶಶಿ
  94483 57709

  ಪ್ರತ್ಯುತ್ತರಅಳಿಸು
 3. uttamawada prayathna.....devaru olleyadu maadali

  ಪ್ರತ್ಯುತ್ತರಅಳಿಸು
 4. tumba olleya sooktigalannu ponisiddeeri manju. shubhavaagali . . .

  ಪ್ರತ್ಯುತ್ತರಅಳಿಸು
 5. ಧನ್ಯವಾದಗಳು ನಿಮ್ಮ ಪ್ರೀತೀಯ ಪ್ರೋತ್ಸಾಹಕ್ಕೆ

  ಪ್ರತ್ಯುತ್ತರಅಳಿಸು