ನವೆಂಬರ್ 04, 2016

ಒಳಿತು

✍�
ಒಳಿತು...!
 
ಕಾಲೆಳೆವವರ
ನಾಯಕನಾಗುವುದಕ್ಕಿಂತ
ಕೈ-ಹಿಡಿವವರ
ಸೇವಕನಾಗುವುದು
ಶ್ರೇಷ್ಠ...!
ವಂಚಕರಿಗೆ
ಕಿರೀಟವಾಗುವುದಕ್ಕಿಂತ
ಉತ್ತಮರಿಗೆ
ಪಾದುಕೆಯಾಗುವುದು
ಉತ್ಕೃಷ್ಟ..!
     

ನವೆಂಬರ್ 03, 2016

ಮನುಜನ ಕನಸು ನನಸ್ಸಾದಾಗ

ಪುಟ್ಟ ಕಥೆ

ಆತ ಹೆಣ್ಣು, ಹೊನ್ನು ಮತ್ತು ಮಣ್ಣಿಗಾಗಿ ಹಂಬಲಿಸಿ, ಬಹಳ ಶ್ರಮಿಸಿದ...
ಆತನ ಹಾತೊರೆಯುವಿಕೆ ವ್ಯರ್ಥವಾಗಲಿಲ್ಲ...
ಆತನ ಶ್ರಮದ ಪ್ರತಿಫ಼ಲವಾಗಿ ಕಡೆಗೆ ಆತನಿಗೆ ಮಣ್ಣು ದೊರಕಿತು...!!

ಅಕ್ಟೋಬರ್ 23, 2016

ಸದ್ ವಿಚಾರ

*ಸದ್ ವಿಚಾರ*

ಹಣ್ಣುತುಂಬಿದ ಮರಗಳು ಬಾಗುತ್ತವೆ : ಬೋಳುಮರ ನೆಟ್ಟಗೆ ನಿಂತಿರುತ್ತದೆ,

ನೀರು ತುಂಬಿದ ಕಾರ್ಮೋಡಗಳು ನೆಲಕ್ಕೆ ಬರುತ್ತವೆ : ಬಿಳಿ ಮೋಡಗಳು ಹಾರಿಹೋಗುತ್ತವೆ, 

ಹಾಲು ತುಂಬಿದ ಹಸು ಸಾಧುವಾಗಿರುತ್ತದೆ: ಹಾಲಿಲ್ಲದ ದನ ಪುಂಡುತನ ಮಾಡುತ್ತದೆ, 

ಸಿಹಿನೀರು ತುಂಬಿದ ಕೊಳ ಮೌನವಾಗಿರುತ್ತದೆ: ಉಪ್ಪು ನೀರಿನ ಸಮುದ್ರ ಗರ್ಜಿಸುತ್ತದೆ,

ಅಜ್ಞಾನಿ ಹರಟೆ ಹೊಡೆಯುತ್ತಾನೆ: ಜ್ಞಾನಿ ಮೌನವಾಗಿರುತ್ತಾನೆ.
(ಸಂಗ್ರಹಿಸಿದ್ದು)

||ಶವ ಮುಟ್ಟಿದರೆ ಸ್ನಾನ ಮಾಡುತ್ತೀಯ
ಆದರೆ ಮೂಕ ಪ್ರಾಣಿಯ ಹೊಡೆದು ತಿನ್ನುತ್ತೀಯ||

ಈ ಮಂದಿರ ಮಸೀದಿಗಳು ಎಂತಹ ಅದ್ಭುತ ಸ್ಥಳಗಳು.
ಅಲ್ಲಿ ಹೊರಗೆ ಬಡವ ಹಾಗೂ ಒಳಗೆ ಶ್ರೀಮಂತ ಭಿಕ್ಷೆ ಬೇಡುತ್ತಾನೆ...

*ವಿಚಿತ್ರ ಪ್ರಪಂಚದ ಕಠೋರ ಸತ್ಯ*

ಮದುವೆ ಮೆರವಣಿಗೆಯಲ್ಲಿ ವರ ಹಿಂದಿದ್ದರೆ ಲೋಕವೇ ಅವನ ಮುಂದೆ ಸಾಗುತ್ತದೆ. ಅಂತಿಮ ಯಾತ್ರೆಯಲ್ಲಿ ಶವ ಮುಂದಿದ್ದರೆ ಲೋಕವೇ ಹಿಂದೆ ಸಾಗುತ್ತದೆ.

ಅಂದರೆ ಖುಷಿಯಲ್ಲಿ ಮುಂದಿದ್ದರೆ ದುಃಖದಲ್ಲಿ ಹಿಂದಿರುತ್ತಾರೆ.

ಮೇಣದ ಬತ್ತಿ ಹಚ್ಚಿ ತೀರಿ ಹೋದವರ ನೆನೆಯುತ್ತಾರೆ
ಮೇಣದ ಬತ್ತಿ ಆರಿಸಿ ಜನ್ಮದಿನ ಆಚರಿಸುತ್ತಾರೆ.

ವಾಹ್ ಎಂಥ ಪ್ರಪಂಚ!

ಮನೆ ಸುಟ್ಟರೆ ವಿಮಾ ತಗೊಬಹುದು ಕನಸುಗಳು ಸುಟ್ಟರೆ ಏನು ಮಾಡೋಣ??

ಆಕಾಶದಿಂದ ಮಳೆ ಸುರಿದರೆ ಛತ್ರಿ ಹಿಡಿಬಹುದು ಕಣ್ಣಿಂದ ಹನಿ ಸುರಿದರೆ ಏನು ಮಾಡೋಣ? 

ಸಿಂಹ ಘರ್ಜಿಸಿದರೆ ಓಡಿಹೋಗಬಹುದು ಅಹಂಕಾರ ಘರ್ಜಿಸಿದರೆ ಏನು ಮಾಡೋಣ?

ಮುಳ್ಳು ಚುಚ್ಚಿದರೆ ತಗೆಯಬಹುದು ಯಾವುದೋ ಮಾತು ಚುಚ್ಚಿದರೆ ಏನು ಮಾಡೋಣ? 

ನೋವು ಆದರೆ ಔಷಧಿ ತೊಗೊಬಹುದು ವೇದನೆ ಆದರೆ ಏನು ಮಾಡೋಣ?    

ಒಬ್ಬ ಒಳ್ಳೆಯ ಮಿತ್ರ ಒಂದೊಳ್ಳೆ ಔಷಧೀಯ ಹಾಗೆ ಆದರೆ ಒಂದೊಳ್ಳೆ ಗೆಳೆಯರ ಬಳಗ ಒಂದು ಪೂರ್ತಿ ಔಷಧ ಅಂಗಡಿ ಇದ್ದ ಹಾಗೆ.

ಗೆಳೆಯರನ್ನ ಗೆಳೆತನವನ್ನ ಬೆಳೆಸಿ ಪ್ರೀತಿಸಿ ಹಾಗೂ ಹರಸಿ.

ಅಕ್ಟೋಬರ್ 19, 2016

ಮಹನೀಯರ ಮೇರು ನುಡಿಗಳು

ಮಹನೀಯರ ಮೇರು ನುಡಿಗಳು

ನಮ್ಮವರು ನಮ್ಮವರ ಮೇರು ನುಡಿಗಳನ್ನು ಮೆಚ್ಚುವುದನ್ನು ಬಿಟ್ಟು, ಅನ್ಯ ಭಾಷಿಕರ ನುಡಿಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಐನ್ಸ್ಟೀನ್ ಹೇಳಿದ ಮಾತುಗಳನ್ನೇ ಉವಾಚ ಮಾಡುತ್ತಾ ಕನ್ನಡದಲ್ಲೇನಿದೆ ಎಂದು ಅಕಳಿಸುತ್ತಾರೆ .

ಕುವೆಂಪು , ಬೇಂದ್ರೆ, ಮಾಸ್ತಿ, ವಿಶ್ವೇಶ್ವರಯ್ಯರಂತಹ ಇನ್ನು ಹಲವಾರು ಮಹನಿಯರ ಪಾದಧೂಳಿಯಿಂದ ಪುನಿತವಾದ ನಾಡು ನಮ್ಮ ಕನ್ನಡ ನಾಡು. ಕನ್ನಡದಲ್ಲೇ ಕನ್ನಡಿಗರು ಆಡಿದ ನುಡಿಗಳ ಸಂಗ್ರಹ ಇಲ್ಲಿದೆ..

ಬನ್ನಿ ಇನ್ನಾದರೂ ನಮ್ಮ ಕನ್ನಡಿಗರ ಮಾತುಗಳನ್ನು ಬಳಸೋಣ

ಸರಳತನವು ಪರಿಪೂರ್ಣತೆಯ ಲಕ್ಷಣ – ಪಂಡಿತ ತಾರಾನಾಥ.

ಕೊರಬೇಡಿ , ನಿಲ್ಲಬೇಡಿ, ಇಳಿಯ ಬೇಡಿ , ಏರುತ್ತಾ ಇರಿ – ಮಾಸ್ತಿ ವೆಂಕಟೇಶ ಅಯ್ಯಂಗಾರ್.

ಉತ್ತಮವಾದುದು ಶ್ರಮವಿಲ್ಲದೆ ಲಭಿಸದು , ಇಚ್ಹೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ – ಕುವೆಂಪು .

ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು- ಕುವೆಂಪು .

ಲೋಕವೆಲ್ಲಾ ಬಗ್ಗುವುದು ಶ್ರೇಷ್ಠವಾದ ಬುದ್ದಿಗೆ ತಾನೇ ? – ಬಿ ಎಂ ಶ್ರೀಕಂಠಯ್ಯ.

ಜ್ಞಾನಕ್ಕೆ ವಿದ್ಯೆಯೂ , ವಿದ್ಯೆಗೆ ಓದು ಬರಹವೂ ತಳಹದಿ – ಬಿ ಎಂ ಶ್ರೀಕಂಠಯ್ಯ.

ಎಂತಹ ಕಟು ಅನುಭವ ಪ್ರಸಂಗ ಬಂದರೂ ಎದೆಗುಂದಬಾರದು.ಇದೇ ಸುಖಿ ಆಗಿರೋ ರಹಸ್ಯ.- ದಾ ರಾ ಬೇಂದ್ರೆ

ಬುದ್ದಿಯ ಜ್ಞಾನ ಬೇರೆ , ಹೃದಯದ ಜ್ಞಾನ ಬೇರೆ – ಜಿ ಪಿ ರಾಜರತ್ನಂ

ಅಪ್ರಿಯವಾದರು ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ – ಅನಕೃ

ಹೋದ ಐಶ್ವರ್ಯ ಸಿಗಬಹುದು, ಹೋದ ಹೊತ್ತು ಸಿಗುವುದಿಲ್ಲ – ಅನಕೃ

ಮಾನವ ಭೂಮಿಯ ಮೇಲೆ ಇದ್ದುಕೊಂಡು ಸ್ವರ್ಗವನ್ನು ಗೆಲ್ಲುವ ಸಾಧನೆ ಮಾಡಬೇಕು – ವಿನಾಯಕ ಕೃಷ್ಣ ಗೋಕಾಕ

ಮರ್ತ್ಯದಲ್ಲಿ ನಿಂತು ಗೆಲ್ಲು, ಮರ್ತ್ಯವೇ ಒರೆಗಲ್ಲು .- ವಿನಾಯಕ ಕೃಷ್ಣ ಗೋಕಾಕ

ಪ್ರಾಣಿ ಜೀವನ ಮಿತವಾದದು , ಮನುಷ್ಯ ಜೀವನ ಬಹುಮುಖವಾದದು – ಶಿವರಾಮ ಕಾರಂತ

ಜನಾಂಗವನ್ನು ಶ್ರೇಷ್ಠ ಮಾಡುವುದಕ್ಕೆ ಒಂದೇ ದಾರಿ . ಜನರನ್ನು ಶ್ರೇಷ್ಠ ಮಾಡಬೇಕು – ಸರ್ ಎಂ ವಿಶ್ವೇಶ್ವರಯ್ಯ

ಹೆಚ್ಚು ಹೆಚ್ಚಾಗಿ ದುಡಿ — ಸರ್ ಎಂ ವಿಶ್ವೇಶ್ವರಯ್ಯ

ದುಡಿಮೆಗೆ ಗುರಿಯಿರಲಿ , ದುಡಿಯುವುದರಲ್ಲಿ ನಿಯಮವಿರಲಿ – ಸರ್ ಎಂ ವಿಶ್ವೇಶ್ವರಯ್ಯ

ನಿನ್ನ ದುಡಿಮೆಯಲ್ಲಿ ನೀನು ದಕ್ಷನಾಗು – ಸರ್ ಎಂ ವಿಶ್ವೇಶ್ವರಯ್ಯ

ದುಡಿಮೆಯಲ್ಲಿ ಸೇವಾ ಬುದ್ದಿಯಿರಲಿ – ಸರ್ ಎಂ ವಿಶ್ವೇಶ್ವರಯ್ಯ

ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ , ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ ? – ಶಿವರಾಮ ಕಾರಂತ

ಸತ್ಯ ದರ್ಶನವಾಗಬೇಕು ಎಂದರೆ ಅಹಂಕಾರ ವಿಸರ್ಜನೆಯಾಗಬೇಕು.- ತ ರಾ ಸುಬ್ಬರಾವ್

ತಾನು ಆಚರಿಸದೆ ಮತ್ತೊಬ್ಬರು ಮಾತ್ರ ಆಚರಿಸಬೇಕೆಂದು ದ್ವಿವಿಧವಾದುದು ಎಂದು ಧರ್ಮವೆನಿಸಿಕೊಳ್ಳುವುದಿಲ್ಲ – ತ ರಾ ಸುಬ್ಬರಾವ್

ನಾವು ಹುಟ್ಟಿದ ಸಮಾಜಕ್ಕೆ ಸಲ್ಲಿಸಬೇಕಾದ ಋಣ ಸಮಾಜ ಸೇವೆ – ಟಿ ಪಿ ಕೈಲಾಸಂ

ಏನಾದರು ಮಾಡುತಿರು ತಮ್ಮ ಸುಮ್ಮನಿರಬೇಡ – ಗೋಪಾಲ ಕೃಷ್ಣ ಅಡಿಗ

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ -ಅಡಿಗರು

ತಾಯಿ ಇಲ್ಲದ ತವರಿಗೆ ಮಗಳು ಬಂದರೆ ಉರಿಬೇಸಗೆಯಲ್ಲಿ ಮರಳು ಗಾಡಿಗೆ ಬಂದಂತೆ.- ಅನಕೃ

ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.–ಸರ್ ಎಂ.ವಿ

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ — ಟಿ.ಪಿ.ಕೈಲಾಸಂ

ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು-— ಕುವೆಂಪು

ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು— ಮಾಸ್ತಿ

ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು— ಕುವೆಂಪು

ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಭಿಚಾರ – ಎಸ್ ಎಲ್ ಭ್ಯರಪ್ಪ

,॰'॰, ಮೂವರು ಸ್ನೇಹಿತರು ॰'॰

_*॰,॰'॰, ಮೂವರು ಸ್ನೇಹಿತರು ॰'॰,॰'॰,*_

ಗುರುಗಳು ಗುರುಕುಲದಲ್ಲಿ ತಮ್ಮ ಶಿಷ್ಯರೊಡನೆ ಮಾತನಾಡುತ್ತ ಕುಳಿತಿದ್ದರು.
ಆಗ ತಕ್ಷಣ ಅವರು,

'ಎಲ್ಲರೂ ಗಮನವಿಟ್ಟು ಕೇಳಿ. ನಿಮಗೊಂದು ಸಮಸ್ಯೆಯನ್ನು ಹೇಳುತ್ತಿದ್ದೇನೆ.
ಅದರ ನಿಜವಾದ ಅರ್ಥವನ್ನು ಯಾರಾದರೂ ಹೇಳ ಬಲ್ಲಿರಾ ಎಂದು ಕೇಳಿದರು.
ಎಲ್ಲರೂ ಶಾಂತರಾಗಿ ಗುರುಗಳ ಮಾತನ್ನು ಕೇಳತೊಡಗಿದರು

ಗುರುಗಳು ಒಂದು ಕಥೆಯನ್ನು ಹೇಳಿದರು.

ಒಬ್ಬ ಮನುಷ್ಯ ದೇವರನ್ನು ಪ್ರಾರ್ಥಿ ಸಿದಾಗ ಅವನು ಭೂಮಿಯ ಮೇಲೆ ಬದುಕಿ ಉಳಿಯುವ ದಿನಗಳು ಹೆಚ್ಚಿಲ್ಲ ಎಂದು ಗೊತ್ತಾಯಿತು.
ಅವನಿಗೆ ಭಯ, ದುಃಖ ಆದವು.

ತನ್ನನ್ನು ನೆಲದಲ್ಲಿ ಹೂಳಿ ದಾಗ ಗೋರಿಯಲ್ಲಿ ತಾನೊಬ್ಬನೇ ಇರಬೇಕಲ್ಲ

ಎಂಬ ಭಯ ಕಾಡತೊಡಗಿತು.
ತನಗೆ ಯಾರಾದರೂ ಜೊತೆಯಾಗಿರಲು ಒಪ್ಪಿಯಾರು ಎಂದುಕೊಂಡು ತನಗೆ ಅತ್ಯಂತ ಆಪ್ತರಾದ ಮೂವರು ಸ್ನೇಹಿತರನ್ನು ನೆನಪಿಸಿಕೊಂಡು ಮೊದಲನೆ ಸ್ನೇಹಿತನ ಹತ್ತಿರ ಹೋದ.

*`ಗೆಳೆಯಾ, ನನಗೆ ತುಂಬ ಭಯವಾಗುತ್ತಿದೆ.*
*ಯಾವಾಗಲೂ ನನ್ನ ಜೊತೆಗೇ ಇರುತ್ತೀಯಾ*
ಎಂದು ಕೇಳಿದ.

*`ಗೆಳೆಯ, ನೀನೇಕೆ ಚಿಂತೆ ಮಾಡುತ್ತೀ? ನಾನು ಸದಾ ನಿನ್ನೊಡನೆಯೇ ಇರುತ್ತೇನೆ` ಎಂದು ಭರವಸೆ ಕೊಟ್ಟ.*
ಆಗ ಈತ,
*'ಹಾಗಲ್ಲ, ನಾನು ಕೆಲವೇ ದಿನಗಳಲ್ಲಿ ಸಾಯುವವನಿದ್ದೇನೆ. ನನಗೆ ಗೋರಿ ಯಲ್ಲಿ ಒಬ್ಬನೇ ಇರಲು ಭಯ` ಎಂದ.*

*ಸ್ನೇಹಿತ ಬಿಳಿಚಿಕೊಂಡು, `ನಾನು ನಿನ್ನ ಸ್ನೇಹಿತನೇನೋ ಸರಿ.*
*ಆದರೆ ಸಾವು ನಮ್ಮನ್ನು ಬೇರ್ಪಡಿಸುತ್ತ ದಲ್ಲ?*
*ನಾನು ಬೇಕಾದರೆ ಸ್ಮಶಾನ ದಲ್ಲಿ ಸಮಾಧಿಗೆ ನಿನಗೊಂದು ಪುಟ್ಟ ಜಾಗ ಕೊಂಡುಕೊಡಬಲ್ಲೆ, ನಿನ್ನ ಸಮಾಧಿಯ ಮೇಲೆ ಸುಂದರವಾದ ಬಟ್ಟೆಯನ್ನು ಹೊದಿಸಬಲ್ಲೆ, ಆದರೆ ನಿನ್ನೊಡನೆ ಗೋರಿಯ ಒಳಗೆ ಬರ ಲಾರೆ`*  ಎಂದ..

ಈತ ದುಃಖದಿಂದಮತ್ತೊಬ್ಬ ಸ್ನೇಹಿ ತನ ಮನೆಗೆ ಹೋಗಿ ಇದೇ ಸಮಸ್ಯೆ ಯನ್ನು ಅವನ ಮುಂದಿಟ್ಟು ಸತ್ತನಂತರ  ತನ್ನೊಂದಿಗೆ ಇರಲು ಕೇಳಿಕೊಂಡ. ಆತ ಹೇಳಿದ,

*'ಗೆಳೆಯಾ, ನಾನು ಯಾವಾಗಲೂ ನಿನ್ನೊಂದಿಗೇ ಇದ್ದೇನೆ, ನಿನ್ನ ಕೊನೆ ಕ್ಷಣದವರೆಗೂ ನಿನ್ನೊಡನೆ ಇರು ತ್ತೇನೆ. ಆದರೆ ಸಾವು ನಿನ್ನನ್ನು ಬೇರ್ಪ ಡಿಸಿದಾಗ ಬಹಳ ಹೆಚ್ಚೆಂದರೆ ನಾನು ನಿನ್ನನ್ನು ಹೆಗಲಮೇಲೆ ಹೊತ್ತು ಕೊಂಡು ಸ್ಮಶಾನದವರೆಗೆ ಬಂದು ನಿನ್ನ ದೇಹವನ್ನು ಗೋರಿಯಲ್ಲಿರಿಸಿ ಬರಬಹುದು. ಅನಂತರ ನಾನು ಏನೂ ಮಾಡಲಾರೆ, ಕ್ಷಮಿಸು' ಎಂದ......*

ಇವನ ದುಃಖ ಮತ್ತಷ್ಟು ಹೆಚ್ಚಾ ಯಿತು. ನಿರಾಶನಾಗಿ ಮೂರನೆಯ ಗೆಳೆಯನಲ್ಲಿಗೆ ಹೋಗಿ ಇದನ್ನೇ ವಿಸ್ತರಿಸಿ ತನ್ನ ಇನ್ನಿಬ್ಬರು ಹೇಳಿದ ಮಾತುಗಳನ್ನು ಒಪ್ಪಿಸಿದ.  ಅವನಿಗೆ ಇವನಿಂದಲೂ ಅವರು ನುಡಿದಂಥ ಮಾತುಗಳೇ ಬರುತ್ತವೆಂಬುದು ಖಚಿತವಾಗಿತ್ತು. ಆದರೆ ಆ 3 ನೇ ಗೆಳೆಯ ಹೇಳಿದ,

*ಚಿಂತೆ ಬಿಡು ಮಿತ್ರ, ನಾನು ನಿನ್ನೊ ಡನೆ ಸ್ಮಶಾನಕ್ಕೆ ಮಾತ್ರವಲ್ಲ, ಗೋರಿ ಗೂ ಬರುತ್ತೇನೆ.*
*ದೇವತೆಗಳು ಬಂದು ನಿನ್ನ ಪ್ರಶ್ನಿಸುವಾಗಲೂ ನಾನು ನಿನಗೆ ಸಹಾಯ ಮಾಡುತ್ತೇನೆ.*
*ಸೇತುವೆ ಯನ್ನು ದಾಟಿ ಸ್ವರ್ಗಕ್ಕೆ ಹೋಗು ವಾಗಲೂ ನಾನು ಮುಂದೆ ನಿಂತು ನಡೆಸುತ್ತೇನೆ ಎಂದನು*

ಈ ಮಾತುಗಳನ್ನು ಕೇಳಿ ಆ ವ್ಯಕ್ತಿಗೆ ತುಂಬ ಸಮಾಧಾನವಾಯಿತು.

ಈ ಕಥೆಯನ್ನು ಹೇಳಿ ಗುರುಗಳು  ಕೇಳಿದರು,

'ಆ ಮೂವರು ಸ್ನೇಹಿತರು ಯಾರು ಗೊತ್ತೇ..........?' ಎಂದರು

ಶಿಶ್ಯರಿಂದ ಉತ್ತರ ಬರದಿದ್ದಾಗ ತಾವೇ ನುಡಿದರು,

ಮೊದಲನೆಯ ಸ್ನೇಹಿತ *ಹಣ,*

*ಅದು ನಿಮಗಾಗಿ ಸ್ಮಶಾನದಲ್ಲಿ ಸ್ಥಳ ಕೊಳ್ಳುವುದಕ್ಕೆ, ಬಟ್ಟೆ ಕೊಳ್ಳಲಿಕ್ಕೆ ಮಾತ್ರ ಪ್ರಯೋಜನಕಾರಿ........*

ಎರಡನೆಯ ಸ್ನೇಹಿತ, *ಹೆಂಡತಿ, ಮಕ್ಕಳು ಮತ್ತು ಪರಿವಾರ...‌‌.......*

*ಅವರು ನಿಮ್ಮನ್ನು ಹೊತ್ತುಕೊಂಡು ಸ್ಮಶಾನದವರೆಗೆ ಮಾತ್ರ ಬರಬಲ್ಲರು.*

ಮೂರನೆಯ ಸ್ನೇಹಿತ, ನೀವು ಮಾಡಿದ *ಧರ್ಮಕಾರ್ಯಗಳು........*

*ಅವು ನಿಮ್ಮನ್ನು ಸ್ವರ್ಗದವರೆಗೂ ಹಿಂಬಾಲಿಸಿ ಬರುತ್ತವೆ .*

ಎಂಥ ಅದ್ಭುತ ಮಾತು!
ಎಷ್ಟು ಸುಲಭವಾಗಿ, ಸುಂದರವಾಗಿ ಹೇಳಿದ್ದು!
ಇದು ನಮ್ಮ ನೆನಪಿನಲ್ಲಿ ಸದಾ ಇದ್ದರೆ ಎಷ್ಟು ಒಳ್ಳೆಯ ದಲ್ಲವೇ?
👏👏👏👏👏👏👏👏

ಸೆಪ್ಟೆಂಬರ್ 25, 2016

ಅಂಗೈಲಿ ಆರೋಗ್ಯ

ನಿಮ್ಮ  ಆರೋಗ್ಯದ  ಓಳಿತಿಗಾಗಿ

♦ *ಬಿಕ್ಕಳಿಕೆ ಬರುವುದೇ :* ಹುರುಳಿ ಕಷಾಯ ಸೇವಿಸಿರಿ.
♦ *ಕಫ ಬರುವುದೇ :* ಶುಂಠಿ ಕಷಾಯ ಸೇವಿಸಿರಿ.
♦ *ಹೊಟ್ಟೆಯಲ್ಲಿ ಹರಳಾದರೇ :* ಬಾಳೆದಿಂದಿನ ಪಲ್ಯ ಸೇವಿಸಿರಿ.
♦ *ತೊದಲು ನುಡಿಯುತ್ತಿದ್ದರೆ :* ಮೃತ್ಯುಂಜಯ ಮಂತ್ರ ಹೇಳಿರಿ.
♦ *ಬಿಳಿ ಕೂದಲೇ :* ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
♦ *ಮರೆವು ಬರುವುದೇ :* ನಿತ್ಯ ಸೇವಿಸಿ ಜೇನು.
♦ *ಕೋಪ ಬರುವುದೇ :* ಕಾಳು ಮೆಣಸು ಸೇವಿಸಿ.
♦ *ಮೂಲವ್ಯಾಧಿಯೇ :* ನಿತ್ಯ ಸೇವಿಸಿ ಎಳ್ಳು.
♦ *ಮುಪ್ಪು ಬೇಡವೇ :* ಗರಿಕೆ ರಸ ಸೇವಿಸಿ.
♦ *ನಿಶಕ್ತಿಯೇ :* ದೇಶಿ ಆಕಳ ಹಾಲು ಸೇವಿಸಿ.
♦ *ಇರುಳುಗಣ್ಣು ಇದೆಯೇ :* ತುಲಸಿ ರಸ ಕಣ್ಣಿಗೆ ಹಾಕಿ.
♦ *ಕುಳ್ಳಗಿರುವಿರೇ :* ನಿತ್ಯ ಸೇವಿಸಿ ನಿಂಬೆ ಹಣ್ಣು.
♦ *ತೆಳ್ಳಗಿರುವಿರೆ :* ನಿತ್ಯ ಸೇವಿಸಿ ಸೀತಾ ಫಲ.
♦ *ತೆಳ್ಳಗಾಗಬೇಕೇ :* ನಿತ್ಯ ಸೇವಿಸಿ ಬಿಸಿ ನೀರು.
♦ *ಹಸಿವಿಲ್ಲವೇ :* ನಿತ್ಯ ಸೇವಿಸಿ ಓಂ ಕಾಳು.
♦ *ತುಂಬಾ ಹಸಿವೇ :* ಸೇವಿಸಿ ಹಸಿ ಶೇಂಗಾ.
♦ *ಬಾಯಾರಿಕೆಯೇ :* ಸೇವಿಸಿ ತುಳಸಿ.
♦ *ಬಾಯಾರಿಕೆ ಇಲ್ಲವೇ :* ಸೇವಿಸಿ ಬೆಲ್ಲ.
♦ *ಸಕ್ಕರೆ ಕಾಯಿಲೆಯೇ :* ಬಿಡಿ ಸಕ್ಕರೆ, ಸೇವಿಸಿ ರಾಗಿ.
♦ *ಸಾರಾಯಿ ದಾಸರೇ :* ಗೋಸೇವೆ ಮಾಡಿ,ಗೋಮೂತ್ರ ಸೇವಿಸಿ.
♦ *ರಕ್ತ ಹೀನತೆಯೇ :* ನಿತ್ಯ ಸೇವಿಸಿ ಪಾಲಕ್ ಸೊಪ್ಪು.
♦ *ತಲೆ ಸುತ್ತುವುದೇ :* ಬೆಳ್ಳುಳ್ಳಿ ಕಷಾಯ ಸೇವಿಸಿ.
♦ *ದೃಷ್ಟಿ ದೋಷವೇ :* ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ,ನಿತ್ಯ ಸೇವಿಸಿ ಕಿರುಕಸಾಲಿ.
♦ *ಬಂಜೆತನವೇ :* ಔದುಂಬರ ಚಕ್ಕೆ ಕಷಾಯ ಸೇವಿಸಿ.
♦ *ಭಯವೇ :* ಗೋಮೂತ್ರ ಸೇವಿಸಿ.
♦ *ಸ್ವಪ್ನ ದೋಷವೇ :* ತುಳಸಿ ಕಷಾಯ ಸೇವಿಸಿ.
♦ *ಅಲರ್ಜಿ ಇದೆಯೇ :* ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಹೃದಯ ದೌರ್ಬಲವೇ :* ಸೋರೆಕಾಯಿ ರಸ ಸೇವಿಸಿ.
♦ *ರಕ್ತ ದೋಷವೇ :* ಕೇಸರಿ ಹಾಲು ಸೇವಿಸಿ.
♦ *ದುರ್ಗಂಧವೇ :* ಹೆಸರು ಹಿಟ್ಟು ಸ್ನಾನ ಮಾಡಿ.
♦ *ಕೋಳಿ ಜ್ವರಕ್ಕೆ :* ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಕಾಲಲ್ಲಿ ಆಣಿ ಇದೆಯೇ :* ಉತ್ತರಾಣಿ ಸೊಪ್ಪು ಕಟ್ಟಿರಿ.
♦ *ಮೊಣಕಾಲು ನೋವು :* ನಿತ್ಯ ಮಾಡಿ ವಜ್ರಾಸನ.
♦ *ಸಂಕಟ ಆಗುವುದೇ :* ಎಳನೀರು ಸೇವಿಸಿ.
♦ *ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ :* ನಿತ್ಯ ಕೊಡಿ ಜೇನು.
♦ *ಜಲ ಶುದ್ಧಿ : ಮಾಡಬೇಕೇ :* ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.
♦ *ವಾಂತಿಯಾಗುವುದೇ :* ಎಳನೀರು-ಜೇನು ಸೇವಿಸಿ.
♦ *ಭೇದಿ ತುಂಬಾ ಆಗುವುದೇ :* ಅನ್ನ ಮಜ್ಜಿಗೆ ಊಟ ಮಾಡಿ.
♦ *ಜಿಗುಪ್ಸೆ ಆಗಿದೆಯೇ :* ಪ್ರಾಣಾಯಾಮ ಮಾಡಿ.
♦ *ಹಲ್ಲು ಸಡಿಲವೇ :* ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
♦ *ಕಾಮಾಲೆ ರೋಗವೇ :* ನಿತ್ಯ ಮೊಸರು ಸೇವಿಸಿ.
♦ *ಉಗುರು ಸುತ್ತು ಇದೆಯೇ :* ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
♦ *ಎದೆ ಹಾಲಿನ ಕೊರತೆಯೇ :* ನಿತ್ಯ ಸೇವಿಸಿ ಎಳ್ಳು.
♦ *ಎಲುಬುಗಳ ನೋವೇ :* ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.

ಸಫಲ ಸಂವಹನಕ್ಕೆ ಸಲಹೆಗಳು:

ಸಫಲ ಸಂವಹನಕ್ಕೆ ಸಲಹೆಗಳು:
-----------------------------------
ಮಾತನಾಡುವಾಗ......
# ತಾಯಿಯೊಂದಿಗೆ ಮಮತೆಯಿಂದ
ಮಾತನಾಡಿ
# ತಂದೆಯೊಂದಿಗೆ ಗೌರವದಿಂದ
ಮಾತನಾಡಿ
# ಗುರುವಿನೊಂದಿಗೆ ವಿನಮ್ರತೆಯಿಂದ
ಮಾತನಾಡಿ
# ಪತ್ನಿಯೊಂದಿಗೆ ಸತ್ಯವಾಗಿ
ಮಾತನಾಡಿ
# ಸಹೋದರರೊಂದಿಗೆ ಸಂಯಮದಿಂದ
ಮಾತನಾಡಿ
# ಸಹೋದರಿಯೊಂದಿಗೆ ಪ್ರೀತಿಯಿಂದ
ಮಾತನಾಡಿ
# ಮಕ್ಕಳೊಂದಿಗೆ ಉತ್ಸಾಹದಿಂದ
ಮಾತನಾಡಿ
# ಸಂಭಂದಿಕರೊಂದಿಗೆ ಪರಾನುಭೂತಿಯಿಂದ
ಮಾತನಾಡಿ
# ಸ್ನೇಹಿತರೊಂದಿಗೆ ಮುಕ್ತವಾಗಿ
ಮಾತನಾಡಿ
# ಅಧಿಕಾರಿಗಳೊಂದಿಗೆ ನಯವಾಗಿ
ಮಾತನಾಡಿ
# ವ್ಯಾಪಾರಿಗಳೊಂದಿಗೆ ಕಟ್ಟುನಿಟ್ಟಾಗಿ
ಮಾತನಾಡಿ
# ಗ್ರಾಹಕರೊಂದಿಗೆ ಪ್ರಾಮಾಣಿಕವಾಗಿ
ಮಾತನಾಡಿ
# ಕೆಲಸಗಾರರೊಂದಿಗೆ ಸೌಜನ್ಯದಿಂದ   ಮಾತನಾಡಿ
# ರಾಜಕಾರಣಿಗಳೊಂದಿಗೆ ಎಚ್ಚರಿಕೆಯಿಂದ
ಮಾತನಾಡಿ
*ದೇವರೊಂದಿಗೆ ಮೌನವಾಗಿ ಮಾತನಾಡಿ*

ಸೆಪ್ಟೆಂಬರ್ 15, 2016

ಲೋಕರೂಢಿ

*ನೊಣಗಳು ನಮ್ಮ  ಸುಂದರವಾದ*
*ಇಡೀ ದೇಹವನ್ನು ಬಿಟ್ಟು ಗಾಯದ*
*ಮೇಲೆಯೇ ಕುಳಿತುಕೊಳ್ಳುವ ಹಾಗೆ,*
*ಕೆಲವರು ನಮ್ಮಲ್ಲಿರುವ*
*ಸದ್ಗುಣಗಳನ್ನು ತಳ್ಳಿಹಾಕಿ*
*ಲೋಪದೋಷಗಳನ್ನು*
*ಮಾತ್ರ ಗಮನಿಸುತ್ತಾರೆ......*
*ಚಿಂತಿಸದಿರಿ.................*
*ಹುಡುಕುವವರು ಏನಾದರೂ*
*ಹುಡುಕಿಕೊಂಡು ಇರಲಿ,*
*ನಮಗೆ ನಮ್ಮತನದ ಅರಿವಿರಲಿ....*
*ನಮ್ಮ ಅಂತರಾಳ*
*ಯಾವಾಗಲೂ*
*ಒಳ್ಳೆಯದು ಬಯಸಲಿ.....!!*

ಆಗಸ್ಟ್ 26, 2016

ದಿನಕ್ಕೊಂದು ಚೆನ್ನುಡಿ

ನಮಗೆ ವಸ್ತುಗಳ ಮೇಲೆ “ಆಸೆ – ಕಾಮ “. ಸಿಗದಿದ್ದರೆ “ಕೋಪ” – ಕ್ರೋಧ ” ಸಿಕ್ಕರೆ ತನ್ನಲ್ಲೇ ಇರಬೇಕು ಎಂಬ-” ಮೋಹ” ಸ್ವಲ್ಪ ಸಿಕ್ಕರೆ ಹೆಚ್ಚು ಬೇಕೆಂಬ ” ಲೋಭ ” ಹೆಚ್ಚು ಸಿಕ್ಕರೆ ಪರರ ಪ್ರತಿ “ಮದ” ಕಡಿಮೆ ಸಿಕ್ಕರೆ ಅಧಿಕ ಪಡೆದವರ ಮೇಲೆ – “ಮತ್ಸರ”.
ಈ ಆರು ಆಂತರಿಕ ವೈರಿಗಳ ಮೇಲೆ ಜಯ ಸಾಧಿಸುವುದೇ ಆಧ್ಯಾತ್ಮ ಸಾಧನೆಯ ಮೂಲ ಗುರಿ. – ಅನಾಮಿಕ

ಮೇ 27, 2016

ಸ್ವಾಮಿ ವಿವೇಕಾನಂದರ ದಿವ್ಯ ವಾಣಿ


ಸ್ವಾಮಿ ವಿವೇಕಾನಂದರ ದಿವ್ಯ ವಾಣಿ

• ಯಾವುದಕ್ಕೂ ಅಂಜದಿರು; ಅಧ್ಭುತ ಕಾರ್ಯವನ್ನೆಸಗುವೆ. ಭೀತಿಯೇ ಪ್ರಪಂಚದ ಎಲ್ಲ ದುಃಖಗಳಿಗೂ ಮಹತ್ಕಾರಣ. ನಮ್ಮ ದುರವಸ್ಥೆಗಳಿಗೆಲ್ಲಾ ಭೀತಿಯೇ ಕಾರಣ. ನಿರ್ಭೀತಿಯೇ ಕ್ಷಣಮಾತ್ರದಲ್ಲಿ ಸ್ವರ್ಗವನ್ನು ಸಾಧಿಸಿಕೊಡಬಲ್ಲದು. ಆದುದರಿಂದ ಎದ್ದು ನಿಲ್ಲು, ಜಾಗೃತನಾಗು ಮತ್ತು ಗುರಿ ಪ್ರಾಪ್ತವಾಗುವವರೆಗೂ ನಿಲ್ಲದಿರು.

• ನಿಮ್ಮೊಬ್ಬರ ಮೇಲೆಯೇ ಇಡೀ ಕೆಲಸವೂ ಬಿದ್ದಿದೆಯೇನೋ ಎಂಬಂತೆ ನೀವು ಪ್ರತಿಯೊಬ್ಬರೂ ಕೆಲಸ ಮಾಡಿ. ಐವತ್ತಕ್ಕೂ ಹೆಚ್ಚು ಶತಮಾನಗಳು ನಿಮ್ಮನ್ನು ನೋಡುತ್ತ ನಿಂತಿವೆ. ಭಾರತದ ಭವಿಷ್ಯ ನಿಮ್ಮನ್ನು ಅವಲಂಬಿಸಿದೆ. ಕೆಲಸಮಾಡಿಕೊಂಡು ಹೋಗಿ.

• ಧರ್ಮದ ರಹಸ್ಯವಿರುವುದು ಸಿದ್ಧಾಂತಗಳಲ್ಲಲ್ಲ. ಅದರ ಅನುಷ್ಠಾನದಲ್ಲಿ. ಒಳ್ಳೆಯವರಾಗಿರುವುದು, ಒಳ್ಳೆಯದನ್ನು ಮಾಡುವುದು –ಇದೇ ಧರ್ಮದ ಸರ್ವಸ್ವ.

• ಮಾನವನಲ್ಲಿ ಈಗಾಗಲೇ ಅಡಗಿರುವ ದೈವತ್ವವನ್ನು ಪ್ರಕಾಶಪಡಿಸುವುದೇ ಧರ್ಮ.

• ಪ್ರಾಣಿಸಹಜ ವ್ಯಕ್ತಿಯನ್ನು ಮನುಷ್ಯನನ್ನಾಗಿಸಿ, ಮನುಷ್ಯನನ್ನು ದೇವರನ್ನಾಗಿಸುವ ಭಾವನೆಯೇ ಧರ್ಮ.

• ಯಾರಿಗೆ ತನ್ನಲ್ಲಿ ತನಗೇ ನಂಬಿಕೆಯಿಲ್ಲವೋ ಅವನು ನಾಸ್ತಿಕ. ಹಳೆಯ ಧರ್ಮಗಳು ಹೇಳಿದವು, ದೇವರನ್ನು ನಂಬದವನು ನಾಸ್ತಿಕ ಎಂದು. ಹೊಸ ಧರ್ಮವು ಹೇಳುತ್ತದೆ, ಯಾರಿಗೆ ತನ್ನಲ್ಲಿ ನಂಬಿಕೆಯಿಲ್ಲವೋ ಅವನು ನಾಸ್ತಿಕ ಎಂದು.

• ಈ ಜಗತ್ತಿನ ಇತಿಹಾಸ ಆತ್ಮಶ್ರದ್ಧೆಯನ್ನು ಹೊಂದಿದ್ದ ಕೆಲವೇ ವ್ಯಕ್ತಿಗಳ ಇತಿಹಾಸ. ಆ ಶ್ರದ್ಧೆ ಅಂತರಂಗದ ದಿವ್ಯತೆಯನ್ನು ಬಡಿದೆಬ್ಬಿಸುತ್ತದೆ. ಆಗ ನೀವೇನನ್ನು ಬೇಕಾದರೂ ಸಾಧಿಸಬಲ್ಲಿರಿ.

• ನೀವು ಯಶಸ್ಸನ್ನು ಪಡೆಯಲು ದೃಢ ಪ್ರಯತ್ನಬೇಕು, ಅಪಾರ ಇಚ್ಚಾಶಕ್ತಿ ಬೇಕು. ‘ನಾನು ಸಮುದ್ರವನ್ನೇ ಪಾನಮಾಡುತ್ತೇನೆ’, ಎಂದು ಪ್ರಯತ್ನಶೀಲನು ಹೇಳುತ್ತಾನೆ. ‘ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಪುಡಿಯಾಗುತ್ತವೆ’ ಎನ್ನುತ್ತಾನವನು. ಇಂತಹ ಶಕ್ತಿ ಯನ್ನೂ ಛಾತಿಯನ್ನೂ ಪಡೆಯಿರಿ; ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ.

• ಪ್ರತಿಯಾಗಿ ಏನನ್ನೂ ಬಯಸಬೇಡಿ. ಆದರೆ ನೀವು ಹೆಚ್ಚು ಕೊಟ್ಟಷ್ಟೂ ನಿಮಗೆ ಹೆಚ್ಚು ಬರುತ್ತದೆ.

• ವಿಕಾಸವೇ ಜೀವನ; ಸಂಕೋಚವೇ ಮರಣ. ಪ್ರೇಮವೆಲ್ಲಾ ವಿಕಾಸ; ಸ್ವಾರ್ಥವೆಲ್ಲಾ ಸಂಕೋಚ; ಆದುದರಿಂದ ಪ್ರೇಮವೇ ಬದುಕಿನ ಧರ್ಮ.

• ಬುದ್ಧಿ ಶ್ರೇಷ್ಠವಾದುದು ನಿಜ. ಆದರ ಕಾರ್ಯವ್ಯಾಪ್ತಿ ಸೀಮಿತವಾದುದು. ಸ್ಫೂರ್ತಿ ಉಂಟಾಗುವುದು ಹೃದಯದ ಮೂಲಕ; ಹೃದಯವೇ ಸ್ಫೂರ್ತಿಯ ಮೂಲ.

• ವತ್ಸ, ಪ್ರೀತಿಗೆ ಸೋಲೆಂಬುದಿಲ್ಲ; ಇಂದೋ ನಾಳೆಯೋ ಅಥವಾ ಯುಗಾಂತರವೋ ಸತ್ಯ ಗೆದ್ದೇ ತೀರುವುದು. ಪ್ರೀತಿ ಖಂಡಿತ ಜಯ ಗಳಿಸುತ್ತದೆ. ನಮ್ಮ ಮಾನವಬಂಧುಗಳನ್ನು ನೀವು ಪ್ರೀತಿಸುತ್ತೀರೇನು?

• ಜೀವನಾವಧಿ ಅಲ್ಲ, ಪ್ರಾಪಂಚಿಕ ವಿಷಯಗಳೆಲ್ಲ ಕ್ಷಣಿಕ. ಆದರೆ ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು.

• ಎದ್ದೇಳಿ ಕಾರ್ಯೋನ್ಮುಖರಾಗಿ, ಈ ಜೀವನವಾದರೂ ಎಷ್ಟು ಕಾಲ? ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವೆತ್ಯಾಸ? ಅವೂ ಅಸ್ತಿತ್ವಕ್ಕೆ ಬರುತ್ತವೆ, ನಶಿಸಿ ನಿರ್ನಾಮವಾಗುತ್ತವೆ.

• ಪರಹಿತಕ್ಕಾಗಿ ನಿಮ್ಮ ಜೀವನವನ್ನು ಮುಡಿಪಾಗಿಡಿ. ನೀವು ತ್ಯಾಗಜೀವನವನ್ನು ಆರಿಸಿಕೊಳ್ಳುವುದಾದರೆ ಸೌಂದರ್ಯ, ಹಣ, ಅಧಿಕಾರಗಳ ಕಡೆ ತಿರುಗಿಯೂ ನೋಡಬೇಡಿ. 

• ಎಲ್ಲವನ್ನೂ ದೂರ ಎಸೆಯಿರಿ. ನಿಮ್ಮ ಮುಕ್ತಿಯ ಬಯಕೆಯನ್ನು ಕೂಡ. ಇತರರಿಗೆ ಸಹಾಯಮಾಡಿ.

• ನಮಗೆ ತ್ಯಾಗ ಮಾಡುವ ಧೈರ್ಯ ಬೇಕಾದರೆ ನಾವು ಉದ್ವೇಗವಶರಾಗಕೂಡದು. ಉದ್ವೇಗ ಕೇವಲ ಪ್ರಾಣಿಗಳಿಗೆ ಸೇರಿದ್ದು. ಪ್ರಾಣಿಗಳು ಸಂಪೂರ್ಣವಾಗಿ ಉದ್ವೇಗದ ಅಧೀನದಲ್ಲಿರುವುವು.

• ಆದರ್ಶದಿಂದ ಕೂಡಿದ ವ್ಯಕ್ತಿ ಒಂದು ಸಾವಿರ ತಪ್ಪುಗಳನ್ನು ಮಾಡಿದರೆ, ಆದರ್ಶವಿಲ್ಲದ ವ್ಯಕ್ತಿಯು ಐವತ್ತು ಸಾವಿರ ತಪ್ಪುಗಳನ್ನು ಮಾಡುತ್ತಾನೆ. ಆದ್ದರಿಂದ ಆದರ್ಶವನ್ನು ಇಟ್ಟುಕೊಳ್ಳುವುದು ಒಳ್ಳೆಯದು.

• ಜೀವನವೆಂಬುದು ಕಠಿಣ ಸತ್ಯ. ಧೈರ್ಯವಾಗಿ ಅದನ್ನು ಎದುರಿಸಿ. ನಿಮ್ಮ ಮಾರ್ಗದಲ್ಲಿ ಮುಂದುವರೆಯಿರಿ. ಅದು ಅಭೇದ್ಯವಾಗಿರಬಹುದು. ಆದರೆ ಆತ್ಮ ಅದಕ್ಕಿಂತ ಬಲಯುತವಾದುದು.

• ಈ ಪ್ರಪಂಚ ಒಂದು ದೊಡ್ಡ ಗರಡಿ ಮನೆ. ನಾವಿಲ್ಲಿ ಬಲಿಷ್ಠರಾಗುವುದಕ್ಕೆ ಬಂದಿದ್ದೇವೆ.

• ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ.

• ಹೇಡಿಗಳು ಮಾತ್ರ, ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು ಎಂಬುದನ್ನು ನೆನಪಿನಲ್ಲಿಡಿ. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಧೀರರಾಗಿ, ನೀತಿವಂತರಾಗಿ , ಸಹಾನುಭೂತಿಯುಳ್ಳವರಾಗಿ.

• ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.

• ಮೊದಲು ಚಾರಿತ್ರ್ಯವನ್ನು ಬೆಳೆಸಿ. ನೀವು ಮಾಡಬೇಕಾದ ಅತ್ಯುನ್ನತ ಕರ್ತವ್ಯ ಇದು. 

• ಮನಸ್ಸನ್ನು ಶಕ್ತಿಯುತವೂ, ಶಿಸ್ತುಬದ್ದವೂ ಆಗಿಸುವುದರಲ್ಲಿಯೇ ಜ್ಞಾನದ ಮೌಲ್ಯವಿರುವುದು. 

• ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ; ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತಕಾರ್ಯ ಉದ್ಭವಿಸುತ್ತದೆ.

• ನಿಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಮಾಡಿ ನೀವು ಶುದ್ಧ ಚಾರಿತ್ರ್ಯವನ್ನು ರೂಢಿಸಿಕೊಳ್ಳಬೇಕು. ಕರ್ತವ್ಯವನ್ನು ಮಾಡಿದರೆ ಕರ್ತವ್ಯಭಾರದಿಂದ ಪಾರಾಗುತ್ತೇವೆ.

• ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ರಾಷ್ಟ್ರವೂ ಶ್ರೇಷ್ಠತೆಯನ್ನು ಪಡೆಯಲು ಮೂರು ಸಂಗತಿಗಳು ಅವಶ್ಯಕ:
1.ಒಳಿತಿನ ಶಕ್ತಿಯಲ್ಲಿ ದೃಢನಂಬಿಕೆ
2.ಮಾತ್ಸರ್ಯ ಹಾಗೂ ಅಪನಂಬಿಕೆಗಳಿಲ್ಲದಿರುವಿಕೆ
3.ಒಳ್ಳೆಯವರಾಗಲು, ಒಳಿತನ್ನು ಮಾಡಲು ಪ್ರಯತ್ನಿಸುವವರಿಗೆ ಸಹಾಯ ಮಾಡುವಿಕೆ.

• ನಮಗೆ ನಾವೇ ಕೇಡನ್ನುಂಟುಮಾಡಿಕೊಳ್ಳದಿದ್ದರೆ, ಜಗತ್ತಿನ ಯಾವ ಶಕ್ತಿಯೂ ನಮಗೆ ಕೇಡನ್ನುಂಟುಮಾಡಲಾರದು ಎಂಬುದು ನಿಶ್ಚಯ.

• ನಮ್ಮ ದುಃಖಗಳಿಗೆಲ್ಲ ನಾವೇ ಜವಾಬ್ಧಾರರು. ಮತ್ತಾರೂ ಅಲ್ಲ. ನಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುವವರು ನಾವೇ.

• ನಿಮಗಾಗಿ ಏನನ್ನೂ ಬಯಸಬೇಡಿ. ಎಲ್ಲವನ್ನೂ ಇತರರಿಗಾಗಿ ಮಾಡಿ. ಭಗವಂತನಲ್ಲೇ ಇರುವುದು ಅವನಲ್ಲೇ ಬಾಳುವುದು, ಚಲಿಸುವುದು ಎಂದರೆ ಇದೇ. 

• ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ. ಎಲ್ಲ ಮಾನವ ಸಹಾಯಕ್ಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೆ?

• ಇತರರಿಗೆ ತಿಳಿಯದೆ ಅವರನ್ನು ನಿಂದಿಸುವುದು ಮಹಾಪರಾಧ ಎಂಬುದನ್ನು ತಿಳಿಯಿರಿ. ಇದನ್ನು ನೀವು ಸಂಪೂರ್ಣ ತ್ಯಜಿಸಬೇಕು.

• ನೀವು ದ್ವೇಷ ಮತ್ತು ಅಸೂಯೆಗಳನ್ನು ಹೊರಸೂಸಿದರೆ ಅವುಗಳು ಚಕ್ರಬಡ್ಡಿ ಸಮೇತ ನಿಮಗೇ ಹಿಂತಿರುಗುತ್ತವೆ. ಯಾವು ಶಕ್ತಿಯೂ ಅದನ್ನು ತಡೆಯಲಾರದು. ಒಮ್ಮೆ ನೀವು ಅವುಗಳನ್ನು ಚಲಿಸುವಂತೆ ಮಾಡಿದರೆ ಅದರ ದುಷ್ಪರಿಣಾಮವನ್ನು ನೀವು ಅನುಭವಿಸಲೇಬೇಕು. ನೀವಿದನ್ನು ನೆನಪಿನಲ್ಲಿಟ್ಟರೆ ದುಷ್ಕಾರ್ಯಗಳಿಂದ ಪಾರಾಗಬಹುದು.

ಫೆಬ್ರವರಿ 10, 2016

ನುಡಿಮುತ್ತುಗಳು - 79

ಬದುಕು ನಿಮಗೆ ಎಷ್ಟು  ಕಷ್ಟಗಳನ್ನು ಕೊಟ್ಟರೂ ನಗು ನಗುತ್ತಾ ಎದುರಿಸಿ.  ಕೊನೆಗೊಂದು ದಿನ ನಿಮಗೆ ನೋವು ಕೊಟ್ಟು ಕೊಟ್ಟು ಬದುಕಿಗೆ ಬೇಸರವಾಗಿಬಿಡುತ್ತದೆ :)

ಪ್ರೀತಿಸಲು ಗೊತ್ತಿರುವ ಹೃದಯ, ಕೇಳಿಸಿಕೊಳ್ಳಲು ಬಲ್ಲ ಕಿವಿ, ಸಹಾಯಕ್ಕೆ ಕೈ ಚಾಚುವ ಮನಸ್ಸಿದ್ದವರು ಜಗತ್ತಿನ ಎಲ್ಲ ಶ್ರೀಮಂತಿರಿಗಿಂತ, ಬುದ್ದಿವಂತರಿಗಿಂತ ಶ್ರೇಷ್ಟ ..

"ತಪ್ಪೊಪ್ಪಿಕೊಂಡು ಕ್ಷಮೆ ಕೇಳಬಲ್ಲವನು ಅತ್ಯಂತ ಧೈರ್ಯವಂತನಾಗಿರುತ್ತಾನೆ. ಇತರರ ತಪ್ಪನ್ನು ಕ್ಷಮಿಸಬಲ್ಲವನು ಅತ್ಯಂತ ಬಲಶಾಲಿಯಾಗಿರುತ್ತಾನೆ.  ಬೇರೆಯವರ ತಪ್ಪನ್ನು ಮರೆಯಲು ಸಾಧ್ಯವಿರುವವನು ಜೀವನದಲ್ಲಿ ಅತ್ಯಂತ ಸುಖಿಯಾಗಿರುತ್ತಾನೆ."

ಕೇವಲ ಐದು ಸೆಕೆಂಡುಗಳ ನಗು ಪೋಟೋದಲ್ಲಿ ಸುಂದರವಾಗಿ ಕಾಣುವಂತಿದ್ದರೆ, ಯಾವತ್ತೂ ನಗು ಮುಖವಿದ್ದಾಗ  ಬದುಕು ಎಷ್ಟು ಸುನ್ದರವಾಗಿರಬಹುದು ಎಂದು ಯೋಚಿಸಿ ನೋಡಿ ನನ್ನ ಸ್ನೇಹಿತರೆ.. ಅದ್ದರಿಂದ ನಗು ತುಂಬಿದ ಬದುಕು ನಿಮ್ಮದಾಗಕ್ಲೆಂದು ಆಶಿಸುತ್ತೇನೆ.

ನುಡಿಮುತ್ತುಗಳು -78

1. ಸಮಯ ಮತ್ತು ನಗು ಎಂಬುದು ಜೀವನದ ವಿಚಿತ್ರಗಳು.  ಕೆಲವೊಮ್ಮೆ ಸಮಯವೂ ನಮಗೆ ನಗುವುದನ್ನೇ ಮರೆಸಿಬಿಡುತ್ತದೆ.  ಮತ್ತೆ ಕೆಲವೊಮ್ಮೆ ನಗುವು  ನಮಗೆ ಸಮಯವನ್ನೇ ಮರೆಸಿಬಿಡುತ್ತದೆ ಅಲ್ಲವೇ?

2. ನಿಮ್ಮ ಶಕ್ತಿ ಹೆಚ್ಚಾಗುವುದು ಗೆಲುವುಗಳಿಂದಲ್ಲ.  ಗೆಲುವಿಗಾಗಿ ನೀವು ನಡೆಸುವ ಹೋರಾಟಗಳಿಂದ.  ಆದುದರಿಂದ ಎಂತಹ ಪರಿಸ್ಥಿಯಲ್ಲೂ ಶರಣಾಗತರಾಗದಿರುವುದೇ ನಿಜವಾದ ಶಕ್ತಿ.....

3. ಮಾನವೀಯತೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಬೇಡಿ.  ಮನುಷತ್ವ ಒಂದು ಸಾಗರವಿದ್ದಂತೆ.  ಕೆಲ ಹನಿಗಳು ಗಲೀಜಾದ ಮಾತ್ರಕ್ಕೆ ಇಡೀ ಸಮುದ್ರವೇ ಕೊಳಕಾಗುವುದಿಲ್ಲ ಅಲ್ಲವೇ?

4. ಭಗವಂತನಿಗೆ ನಿಮ್ಮ ಕಷ್ಟಗಳ ಬಗೆ ದೂರು ನೀಡಬೇಡಿ. ಏಕೆಂದರೆ, ಒಬ್ಬ ಶ್ರೇಷ್ಟ ನಿರ್ದೇಶಕ ಯಾವತ್ತೂ ಅತ್ಯುತ್ತಮ ನಟನಿಗೆ ಅತ್ಯಂತ ಕಷ್ಟದ ಪಾತ್ರ ನೀಡುತ್ತಾನೆ ಎಂಬುದು ನೆನಪಿರಲಿ :)

5. ಇತರರ ನಂಬಿಕೆ ಮತ್ತು ಭಾವನೆಗಳೊಂದಿಗೆ ಎಂದೂ ಆಟವಾಡಬೇಡಿ.  ಆ ಆಟದಲ್ಲಿ ನೀವು ಗೆಲ್ಲಬಹುದು, ಆದರೆ ವ್ಯಕ್ತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ  ಎಚ್ಚರ !!

ಫೆಬ್ರವರಿ 08, 2016

ಮನೆ – ಮನ ಸ್ವಚ್ಛ

ಮನೆಯೊಳಗೆ ದಿನ ನಿತ್ಯ ಗುಡಿಸಿ ಸ್ವಚ್ಛ ಮಾಡುತ್ತಾ ಇರಬೇಕು
ಇಲ್ಲಾಂದ್ರೆ ಧೂಳು ಕಸ ತುಂಬಿ ಮನೆ ಪಾಳುಬಿದ್ದ ಹಾಗೆ ಕಾಣುತ್ತೆ..
ಮನದೊಳಗಿರುವ ದುರ್ವಿಚಾರಗಳನ್ನು ನಿತ್ಯ ಗುಡಿಸಿ ಸುವಿಚಾರಗಳನ್ನ ತುಂಬಿ ಹೃದಯ ಆಲಂಕರಿಸಬೇಕು
ಮನವೆಂಬ ಗುಡಿಯನ್ನ ಪಾಳು ಬೀಳುವಂತೆ ಮಾಡಬಾರದು.

ಫೆಬ್ರವರಿ 05, 2016

ನುಡಿಮುತ್ತಗಳು - 77

ಮನಮುಟ್ಟಿದ ಸಾಲುಗಳು..

1." ನೀವೇನನ್ನು ಬಯಸುತ್ತೀರೋ
ಅದನ್ನು ಪಡೆಯಲಾರಿರಿ. ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ. ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ. ಯಾವುದು ಶಾಶ್ವತವೋ ಅದು ಬೇಸರ.
ಅದೇ ಬದುಕು"...
      ●●●●●●●
2. "ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ ಸಮನಾದೀತು. ಬದುಕಿನಲ್ಲೂ ಹಾಗೆ ನಾವು ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"..
    ●●●●●●●
3. "ಜೀವನದ ಎಲ್ಲಾ ಕ್ಷಣಗಳೂ ನಿಮಗೆ ಸಂತೋಷದಾಯಕ ಆಗಲಾರದು. ದಿನದ ಎಲ್ಲಾ ಘಟನೆಗಳು ನಿಮಗೆ
ಸಮಧಾನವೆನಿಸಲಾರದು. ಆದರೆ ಒಂದು ಸಂಗತಿ ಮಾತ್ರ ನಿಮಗೆ ಅತ್ಯಂತ ಖುಷಿಯೆನಿಸುವದು.
ಅದು ಯಾವುದೆಂದರೆ ಬೇರೆಯವರ
ಕಣ್ಣುಗಳಲಿ ನೀವು ಕಾಣುವ ನಿಮ್ಮ ಬಗೆಗಿನ ಕಾಳಜಿ"...
      ●●●●●●●
4. "ಒಂದು ಪಾತರಗಿತ್ತಿ 14 ದಿನಗಳ ಕಾಲ ಮಾತ್ರ ಬದುಕುಳಿಯುವದು. ಆದರೆ ಅದು ಪ್ರತಿದಿನ ಅತ್ಯಂತ ಸಂತೋಷದಿಂದ ಹಾರಾಡುವದು ಮತ್ತು ಹಲವರ ಹೃದಯಗಳನ್ನ ಗೆಲ್ಲುವುದು ಪ್ರತಿ ಕ್ಷಣವೂ ಅತ್ಯಂತ ಪ್ರಮುಖ. ಯಾವಾಗಲೂ ಸುಖ ಸಂತೋಷದಿಂದಿರಿ"...
     ●●●●●●
5. "ಕಾಲಿಗೆ ಬೂಟುಗಳಿಲ್ಲವೆಂದು ನಾನು ಅಳುತ್ತಿದ್ದೆ. ಆದರೆ ಕಾಲುಗಳೇ ಇಲ್ಲದ ವ್ಯಕ್ತಿಯನು ಕಂಡಾಗ ನಾನು ಅಳುವುದನ್ನು ನಿಲ್ಲಿಸಿಬಿಟ್ಟೆ. ಬದುಕು ಆಶೀರ್ವಾದಗಳ ಸಂತೆ.ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು"...
     ●●●●●●●
6. "ಯಾರಾದರೂ ಬಹು ಬೇಗ ಸತ್ತು
ಹೋದರೆ ದೇವರು ಅವನನ್ನು ತುಂಬಾ ಪ್ರೀತಿಸುತ್ತಾನೆಂದು ಜನ ಅಭಿಪ್ರಾಯ ಪಡುತ್ತಾರೆ. ಆದರೆ ಭೂಮಿಯ ಮೇಲೆ ಇನ್ನೂ ಬದುಕಿದ್ದೇವೆಂದರೆ ಏನರ್ಥ?
ಈ ಭೂಮಿಯ ಮೇಲೆ ಯಾರೋ ದೇವರಿಗಿಂತ ನಮ್ಮನ್ನು ಹೆಚ್ಚಾಗಿ ಪ್ರೀತಿಸುತ್ತಾರೆ ಎಂದರ್ಥ"...
     ●●●●●●●
7. "ನೋವುಂಡ ಹೃದಯ ಸಣ್ಣ ಮಕ್ಕಳಂತೆ. ಅದು ಅಳಬಹುದೇ ಹೊರತು ತನ್ನ ಭಾವನೆಗಳನು ಹಂಚಿಕೊಳ್ಳದು .ಆದ್ದರಿಂದ ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಮೇಲೆ ಕಾಳಜಿ ತೋರುವ ಯಾರನ್ನು ನೋಯಿಸಬೇಡಿ"...
       ●●●●●●●
8. "ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನು  ರೂಪಿಸಲಾರದು. ಶಾಂತವಾಗಿರುವ ಸಾಗರ ಒಬ್ಬ ಒಳ್ಳೆಯ ನಾವಿಕನನು ರೂಪಿಸಲಾರದು. ತಿಳಿಯಾದ ಆಕಾಶ ಒಬ್ಬ ಒಳ್ಳೆಯ ವಿಮಾನ ಚಾಲಕನನ್ನು ರೂಪಿಸಲಾರದು. ಸಮಸ್ಯೆಗಳೇ ಇಲ್ಲದ ಜೀವನ ಎಂದಿಗೂ ಸಾಧಕರನು ರೂಪಿಸದು"...
      ●●●●●●●
9. "ಸಮಯ ನಮಗಾಗಿ ಕಾಯುವುದಿಲ್ಲ ಎಂದಾದರೆ ನಾವೇಕೆ ಯೋಗ್ಯ ಸಮಯಕ್ಕಾಗಿ ಯಾವಾಗಲೂ ಕಾಯಬೇಕು?
ಒಳ್ಳೆಯ ಕೆಲಸ ಮಾಡುವುದಕೆ ಯಾವಾಗಲೂ ಕೆಟ್ಟ ಸಮಯ ಎಂದಿರುವದಿಲ್ಲ"...
      ●●●●●●

ಫೆಬ್ರವರಿ 02, 2016

ಮಾನವನ ಸ್ವಭಾವ

ವಾಹ್ ಮಾನವ ನಿನ್ನ ಸ್ವಭಾವ
||ಶವ ಮುಟ್ಟಿದರೆ ಸ್ನಾನ ಮಾಡುತ್ತೀಯ
ಆದರೆ ಮೂಕ ಪ್ರಾಣಿಯ ಹೊಡೆದು ತಿನ್ನುತ್ತೀಯ||
ಈ ಮಂದಿರ ಮಸೀದಿಗಳು ಎಂತಹ ಅದ್ಭುತ ಸ್ಥಳಗಳು.
ಅಲ್ಲಿ ಹೊರಗೆ ಬಡವ ಹಾಗೂ ಒಳಗೆ ಶ್ರೀಮಂತ ಭಿಕ್ಷೆ ಬೇಡುತ್ತಾನೆ...
*ವಿಚಿತ್ರ ಪ್ರಪಂಚದ ಕಠೋರ ಸತ್ಯ*
ಮದುವೆ ಮೆರವಣಿಗೆಯಲ್ಲಿ ವರ ಹಿಂದಿದ್ದರೆ ಲೋಕವೇ ಅವನ ಮುಂದೆ ಸಾಗುತ್ತದೆ.
ಅಂತಿಮ ಯಾತ್ರೆಯಲ್ಲಿ ಶವ ಮುಂದಿದ್ದರೆ ಲೋಕವೇ ಹಿಂದೆ ಸಾಗುತ್ತದೆ.
ಅಂದರೆ ಖುಷಿಯಲ್ಲಿ ಮುಂದಿದ್ದರೆ ದುಃಖದಲ್ಲಿ ಹಿಂದಿರುತ್ತಾರೆ.
ಮೇಣದ ಬತ್ತಿ ಹಚ್ಚಿ ತೀರಿ ಹೋದವರ ನೆನೆಯುತ್ತಾರೆ
ಮೇಣದ ಬತ್ತಿಆರಿಸಿ ಜನ್ಮದಿನ ಆಚರಿಸುತ್ತಾರೆ.
ವಾಹ್ ಎಂಥ ಪ್ರಪಂಚ
🌎🌎🌎🌎🌎🌎🌎🌎🌎

ವಿನಯವೇ ಭೂಷಣ

ಹಣ್ಣುತುಂಬಿದ ಮರಗಳು ಬಾಗುತ್ತವೆ : ಬೋಳುಮರ ನೆಟ್ಟಗೆ ನಿಂತಿರುತ್ತದೆ, ನೀರು ತುಂಬಿದ ಕಾರ್ಮೋಡಗಳು ನೆಲಕ್ಕೆ ಬರುತ್ತವೆ : ಬಿಳಿ ಮೋಡಗಳು ಹಾರಿಹೋಗುತ್ತವೆ,  ಹಾಲು ತುಂಬಿದ ಹಸು ಸಾಧುವಾಗಿರುತ್ತದೆ: ಹಾಲಿಲ್ಲದ ದನ ಪುಂಡುತನ ಮಾಡುತ್ತದೆ,  ಸಿಹಿನೀರು ತುಂಬಿದ ಕೊಳ ಮೌನವಾಗಿರುತ್ತದೆ: ಉಪ್ಪು ನೀರಿನ ಸಮುದ್ರ ಗರ್ಜಿಸುತ್ತದೆ, ಅಜ್ಞಾನಿ ಹರಟೆ ಹೊಡೆಯುತ್ತಾನೆ: ಜ್ಞಾನಿ ಮೌನವಾಗಿರುತ್ತಾನೆ.

ಆಗಸ್ಟ್ 07, 2015

2,00,000 ಸಂಭ್ರಮ

2,00,000ದ ಸಂಭ್ರಮ

ನನ್ನ ನುಡಿಮುತ್ತುಗಳು ಬ್ಲಾಗ್ ಅನ್ನು 2,00,000 ಕ್ಕೂ ಹೆಚ್ಚಿನ ಜನರಿಂದ ವೀಕ್ಷಣೆಗೆ ಒಳಗಾಗಿರುವುದು ತುಂಬಾ ಹೆಮ್ಮೆಯ ಸಂಗತಿಯಾಗಿದೆ. ಕನ್ನಡ ಭಾಷೆಯ ನುಡಿಮುತ್ತುಗಳು ಜನರನ್ನು ಹೆಚ್ಚೆಚ್ಚು ಆಕರ್ಷಿಸುತ್ತಿರುವುದು. ಕನ್ನಡದ ಬೆಳವಣಿಗೆಯ ಸಂಗತಿ ಹಾಗೂ ಅಂತರ್ಜಾಲದಲ್ಲಿ ಕನ್ನಡದ ಬಳಕೆ ಮಾಡಿರುವುದನ್ನು ಗುರುತಿಸಬಹುದು. 

ನಿಮ್ಮವ,
ಮಾ.ಕೃ.ಮಂಜು
www.makrumanju.blogspot.in


ಕಳೆದ ಪೆಬ್ರವರಿ ತಿಂಗಳಿನಲ್ಲಿ ಈ ಬ್ಲಾಗ್ ನ ವೀಕ್ಷಕರ ಸಂಖ್ಯೆ : 1,66,655 ಇದ್ದದ್ದು ಈಗ ಅಂದರೆ 06.08.2015 ರಂದು 2,00,54 ಆಗಿರುವುದು ಗಮನಾರ್ಹ.

ಜೂನ್ 09, 2015

ನುಡಿಮುತ್ತುಗಳು - 76

೧. ಆಸೆಯೇ ಸುಖಕ್ಕೆ ಮೂಲ. ದುರಾಸೆಯೇ ದುಃಖಕ್ಕೆ ಮೂಲ.
೨. ಆನೆ, ಅಡಿಕೆ ಕದ್ದರೆ ಬಂದೀಖಾನೆ. ಮನಸು, ಹೃದಯ ಕದ್ದರೆ ಸಂಸಾರವೆಂಬ ಬಂದೀಖಾನೆ.
೩. ಕಡಲಿಗೆ ತೀರದ ತೆಂಗಿನ ಮರವೇರುವ ಆಸೆ. ಪ್ರಾಣ ಸ್ನೇಹಿತನಾದ ಗಾಳಿಯಲ್ಲಿ ದಿನವೂ ಹೇಳುವುದೊಂದೇ, ಒಮ್ಮೆ ತಲುಪಿಸಿಬಿಡು.
೪. ಹುಡುಗಿಯೆಂದರೆ ಮಳೆಯಂತೆ. ಸುರಿಯುವ ಮುನ್ನ ಗುಡುಗು, ಸಿಡಿಲು ಗ್ಯಾರಂಟಿ.
೫. ಅಂದಿನ ಮದುವೆ ಒಂದು ವಾಕ್ಯದಲಿ ಅನ್ನೋದಾದ್ರೆ – ಕದ್ದು ಕದ್ದು ನೋಡಬೇಕೆನಿಸುತಿದೆ. ಕುಡಿಮೀಸೆಯ ನೋಟಕೆ ತಲೆಬಾಗಿದೆ.
೬. ನೀನು ನನ್ನವಳಾದರೆ ನನ್ನ ಬಾಳು ಹಾಲು ಸಕ್ಕರೆ. ಇಲ್ಲದಿದ್ರೆ ಹಾಳು ಸಕ್ಕರೆ.
೭. ನಾನು, ನನ್ನದು, ನನ್ನಿಂದ ಎನ್ನುವುದನ್ನು ಬಿಡಿ. ನಾವು, ನಮ್ಮದು, ನಮ್ಮಿಂದ ಎಂದು ಸಂತೋಷ ಪಡಿ.
೮. ನನ್ನ ಮನಸು ನಿನ್ನ ಮನಸಿಗಂದಿತು ಒಮ್ಮೆ ಸನಿಹ ಬಂದು ಬಿಡು. ನಿನ್ನ ಮನಸುತ್ತರಿಸಿತು ನಾನು ಇಂದಿನಿಂದ ಕುರುಡು.
೯. ಕದಿಯಲಾಗದ, ಕೊಟ್ಟಷ್ಟು ಅಧಿಕವಾಗುವ, ಕೊನೆಯವರೆಗೆ ಒಳಿಯುವ ಸಾಧನವು ಒಂದೇ ಇರೋದು ಪ್ರಪಂಚದಲ್ಲಿ – ವಿದ್ಯೆ.
೧೦. ಸಾವಿನ ನಂತರ ಏನಾಗುತ್ತೆ ಅನ್ನೋ ಪ್ರಶ್ನೆಗೆ ಉತ್ತರವೇ ಬದುಕು?

ಮಾರ್ಚ್ 26, 2015

ನುಡಿಮುತ್ತುಗಳು-೭೫

 • ಚೀನಾ ಮಹಾಗೋಡೆಯೇನಾದರೂ ನಮ್ಮ ದೇಶದಲ್ಲಿದ್ದಿದ್ದರೆ ಜಗತ್ತಿನ ಅತಿ ಉದ್ದದ ಶೌಚಾಲಯ ಹೊಂದಿರುವ ಖ್ಯಾತಿ ನಮ್ಮದೇ ಆಗಿರುತ್ತಿತ್ತು.
 • ತನ್ನ ಮಾತು ಕೇಳುವ ಗಂಡನನ್ನು ಮಹಿಳೆ ಇಷ್ಟಪಡುತ್ತಾಳೆ. ಕಡಿಮೆ ಮಾತನಾಡುವವಳೇ ಹೆಂಡತಿಯಾಗಿ ಬರಲಿ ಎಂದು ಗಂಡ ಅಂದುಕೊಳ್ಳುತ್ತಾನೆ.
 • ತಾಯ್ತನ ಎಂಬುದು ಎಲ್ಲ ಸ್ತ್ರೀಯರೂ ಬಯಸುವ ಅವಕಾಶ. ಹಾಗಂತ ಅವಕಾಶ ಸಿಕ್ಕಿತೆಂದು ತಾಯಿಯಾಗಬಾರದು.
 • ನಾವು ಬೇರೆಯವರಿಗೆ ಸಹಾಯ ಮಾಡುವುದಕ್ಕೆ ಈ ಜಗತ್ತಿಗೆ ಬಂದಿದ್ದೇವೆ ಎಂಬ ವಿಚಾರವೇನೊ ಚೆನ್ನಾಗಿದೆ. ಆದರೆ ಆ ಬೇರೆಯವರು ಏನು ಮಾಡಲು ಬಂದಿದ್ದಾರೆ?
 • ಅಕಸ್ಮಾತ್ತಾಗಿ ಹಾವನ್ನು ತುಳಿದು ಕಚ್ಚಿಸಿಕೊಳ್ಳುವುದು ಅರೇಂಜ್ಡ್ ಮ್ಯಾರೇಜ್. ಹಾವಿನ ಮುಂದೆ ನಿಂತು ಕಡಿ, ಕಡಿ ಎಂದುಕುಣಿಯುತ್ತಾ ಕಚ್ಚಿಸಿಕೊಳ್ಳುವುದು ಲವ್ ಮ್ಯಾರೇಜ್.
 • ಫೋನ್ ಕಾಲ್ ರಿಸೀವ್ ಮಾಡುವುದಕ್ಕೆ ನೀವು ಹೆಚ್ಚು ಸಮಯ ತೆಗೆದುಕೊಳ್ಳುತ್ತೀರೆಂದರೆ, ರಿಸೀವ್ ಮಾಡಿದ ಮೇಲೆ ದೊಡ್ಡ ಸುಳ್ಳು ಹೇಳಲಿದ್ದೀರೆಂದರ್ಥ.
 • ಬೇರೆಯವರಿಗಾಗಿ ಒಳ್ಳೆಯ ಕೆಲಸಮಾಡುತ್ತಲೇ ಹೋದರೆ ಅದು ಸಹಜ ಎನ್ನಿಸಿಬಿಡುತ್ತದೆ. ಗಮನ ಸೆಳೆಯುವುದಕ್ಕಾದರೂ ಕೆಲವೊಮ್ಮೆ ತಪ್ಪು ಮಾಡುತ್ತಿರಬೇಕಾಗುತ್ತದೆ.
 • ವಾದ್ರಾ ಪ್ರಧಾನಿಯಾಗಲಿ ಎಂದು ಬಯಸುತ್ತೇನೆ. ಭೂಮಿ ಬಗ್ಗೆ ಈ ವ್ಯಕ್ತಿಯ ಹಸಿವನ್ನು ನೋಡಿದರೆ, ಕಾಶ್ಮೀರ ಹಾಗಿರಲಿ, ಲಾಹೋರ್- ಇಸ್ಲಾಮಾಬಾದ್ಗಳನ್ನು ಉಳಿಸಿಕೊಡಿ ಅಂತ ಪಾಕಿಸ್ತಾನ ಕೇಳಬಹುದು.
 • ಭಾರತೀಯ ರಾಜಕಾರಣಿಗಳನ್ನು ಮೂರ್ಖರು ಎನ್ನುವಂತಿಲ್ಲ. ಜನಕ್ಕೆ ಹಾಗೆ ಹೇಳಬಹುದು. ಪ್ರತಿಬಾರಿಯೂ ನೂರು ಕೋಟಿ ಮಂದಿಯನ್ನು ಅವರು ನಂಬಿಸುತ್ತಾರೆ.
 • ಹೆಂಗಸರ ಬಳಿ ಉಳಿದುಕೊಳ್ಳಬಹುದಾದ ಒಂದೇ ಒಂದು ರಹಸ್ಯ ಎಂದರೆ- ಅವರ ವಯಸ್ಸು.
 • ದೇವರು ಪ್ರತಿಯೊಬ್ಬ ಪುರುಷನಿಗೂ ಒಬ್ಬ ಮಹಿಳೆಯನ್ನು ಸೃಷ್ಟಿಸಿರುತ್ತಾನೆ. ಆಕೆಯಿಂದ ತಪ್ಪಿಸಿಕೊಂಡರೆ, ಜೀವನ ಅದ್ಭುತವಾಗಿರುತ್ತದೆ.
 • ಯಾವ ವ್ಯಕ್ತಿಯೂ ಆತನ ಹೆಂಡತಿ ತಿಳಿದುಕೊಂಡಷ್ಟು ಕೆಟ್ಟವನಾಗಿರುವುದಿಲ್ಲ. ಹಾಗೆಯೇ ಅವನ ಅಮ್ಮ ಅಂದುಕೊಂಡಷ್ಟು ಒಳ್ಳೆಯವನೂ ಆಗಿರುವುದಿಲ್ಲ.
 • ಮಲಗುವಾಗ ಯಾವ ತೊಂದರೆಗಳನ್ನೂ ಹಾಸಿಗೆಗೆ ತೆಗೆದುಕೊಂಡುಹೋಗಬೇಡಿ ಎನ್ನುತ್ತದೆ ಹಳೆಯ ಉಪದೇಶ. ಆದರೆ ಇವತ್ತಿಗೂ ಹೆಚ್ಚಿನವರು ತಮ್ಮ ಹೆಂಡತಿ ಪಕ್ಕದಲ್ಲೇ ಮಲಗುತ್ತಾರೆ.
 • ಕೆಲವು ಗಂಡಸರ ಸಂಕಟ ವಿಚಿತ್ರವಾಗಿರುತ್ತದೆ. ಹೆಂಡತಿಯ ಮೇಕಪ್ ಖರ್ಚು ಭರಿಸಲಾಗುವುದಿಲ್ಲ. ಆದರೆ ಮೇಕಪ್ಗೆ ಖರ್ಚು ಮಾಡದಿದ್ದರೆ ಹೆಂಡತಿಯನ್ನು ಸಹಿಸಲಾಗುವುದಿಲ್ಲ.
 • ದಾಂಪತ್ಯ ಚೆನ್ನಾಗಿ ಇರಬೇಕೆಂದರೆ ಮುಖ್ಯವಾಗಿ ಸರಸವಿರಬೇಕು. ಅತಿಮುಖ್ಯವಾಗಿ ಅದು ನಮ್ಮ ಸಂಗಾತಿಯೊಂದಿಗೇ ಇರಬೇಕು.
 • ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂಬ ಗಾದೆ ಮಾತಿದೆ. ಹಾಗೆಂದು ತುಪ್ಪ ತಿನ್ನಬೇಕು ಎಂದೆನಿಸಿದಾಗಲೆಲ್ಲ ಸಾಲ ಮಾಡಬಾರದು.
 • ನೀವು ಅಂದುಕೊಂಡಂತೆ ಜೀವನ ಸಾಗುತ್ತಿಲ್ಲವೆಂದಾದರೆ ನೀವು ಭವಿಷ್ಯಕ್ಕಿಂತ ಹೆಚ್ಚಾಗಿ ಭೂತಕಾಲದ ಬಗ್ಗೆಯೇ ಯೋಚನೆ ಮಾಡುತ್ತಿದ್ದೀರಿ ಎಂದರ್ಥ. ಹೀಗಾಗಿ ಕಳೆದುಹೋದ ಸಂಗತಿ ಬಿಟ್ಟು ಮುಂದಿನ ಜೀವನದ ಬಗ್ಗೆ ಗಮನಹರಿಸಿ.
 • ಅದೃಷ್ಟವೆಂಬುದು ನಿಮ್ಮ ಮನೆಯ ಬಾಗಿಲನ್ನು ಬಡಿಯದಿದ್ದರೆ ಬೇಸರಿಸಿಕೊಳ್ಳಬೇಡಿ. ಬಡಿಯಲು ನಿಮ್ಮ ಮನೆಗೆ ಬಾಗಿಲೇ ಇಲ್ಲದಿರಬಹುದು. ಮೊದಲು ಬಾಗಿಲನ್ನು ನಿಲ್ಲಿಸುವ ಕೆಲಸ ಮಾಡಿ. ಪರಿಶ್ರಮಪಡದಿದ್ದರೆ ಅದೃಷ್ಟವೂ ನಿಮ್ಮ ಮನೆ ತನಕ ಬರುವುದಿಲ್ಲ.
 • ನಿಮಗೇನು ಅನ್ನಿಸುತ್ತೆ ಎಂಬುದರ ಮೇಲೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಆದರೆ ನೀವು ಏನು ತಿಳಿದುಕೊಂಡಿದ್ದೀರಿ ಎಂಬುದರ ಮೇಲೆ ನಿರ್ಧಾರ ತೆಗೆದುಕೊಳ್ಳಿ. ಏಕೆಂದರೆ ಆ ನಿರ್ಧಾರ ಹೆಚ್ಚು ಗಟ್ಟಿಯಾಗಿರುತ್ತದೆ
 • ಜಗತ್ತಿನಲ್ಲಿ ನೀವು ನೋಡುತ್ತಿರುವ ಸಂಗತಿಗಳು ನಿಮ್ಮ ಯೋಚನೆಯ ಪ್ರತಿಫಲನಗಳಷ್ಟೇ.ನೀವು ಒಳ್ಳೆಯ ರೀತಿಯಲ್ಲಿ ಯೋಚಿಸಿದರೆ ಜಗತ್ತು ಒಳ್ಳೆಯದಾಗಿರುತ್ತದೆ. ಕೆಟ್ಟ ರೀತಿಯಲ್ಲಿ ಯೋಚಿಸಿದರೆ ಅದೂ ಕೆಟ್ಟದಾಗಿರುತ್ತದೆ.
 • ಕ್ರಿಯೆ ಮತ್ತು ಯಶಸ್ಸಿನ ನಡುವೆ ಅವಿನಾಭಾವ ಸಂಬಂಧವಿದೆ. ನೀವು ಕೆಲಸವನ್ನೇ ಆರಂಭಿಸದಿದ್ದರೆ ಯಶಸ್ಸು ಕಾಣಲು ಸಾಧ್ಯವೇ ಇಲ್ಲ. ಹೀಗಾಗಿ ಯಶಸ್ಸಿನ ಬೆನ್ನು ಹತ್ತುವ ಮೊದಲು ಯಾವುದಾದರೊಂದು ಕೆಲಸ ಆರಂಭಿಸಿ.
 • ನಿಮ್ಮಲ್ಲಿರುವ ಜ್ಞಾನ ಎಂದರೆ ಡಬ್ಬದಲ್ಲಿರುವ ಪೈಂಟ್ ಇದ್ದಂತೆ. ಅದನ್ನು ಗೋಡೆಗೆ ಬಳಿದಾಗಲೇ ಅದರ ಮಹತ್ವ ತಿಳಿಯೋದು. ಬರೀ ಡಬ್ಬದಲ್ಲಿದ್ದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ನಿಮ್ಮ ಜ್ಞಾನದಿಂದ ಸುತ್ತಲಿನ ಗೋಡೆಗೆ ವಿವೇಕದ ಬಣ್ಣ ಬಳಿಯಿರಿ.
 • ಜೀವನದ ಸಾರ್ಥಕ್ಯ ನೀವು ಎಷ್ಟು ಖುಷಿಯಲ್ಲಿದ್ದೀರಿಎಂಬುದರಮೇಲೆ ನಿರ್ಧಾರವಾಗುವುದಿಲ್ಲ. ಆದರೆ ನಿಮ್ಮಿಂದ ಬೇರೆಯವರು ಎಷ್ಟು ಸಂತೋಷಪಡುತ್ತಾರೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಹೀಗಾಗಿ ನಿಮ್ಮ ಸುತ್ತ ಇರುವವರನ್ನು ಖುಷಿಯಾಗಿಡಲು ಪ್ರಯತ್ನಿಸಿ.
 • ನಿಮಗೆ ಹಾರಲು ಸಾಧ್ಯವಿಲ್ಲವೇ? ಹಾಗಾದರೆ ಓಡಿ. ನಿಮ್ಮಲ್ಲಿ ಓಡಲು ಶಕ್ತಿ ಇಲ್ಲವೇ, ನಡೆದಾಡಿ. ನಿಮಗೆ ನಡೆಯಲೂ ಆಗದಿದ್ದರೆ ತೆವಳಿಕೊಂಡು ಹೋಗಿ. ನೀವು ಏನೇ ಮಾಡಿ, ಮುನ್ನಡೆಯುತ್ತಲೇ ಇರಿ. ಎಲ್ಲಿಯೂ ನಿಲ್ಲಬೇಡಿ.
 • ಸುಗಮ ರಸ್ತೆಯಿಂದ ಉತ್ತಮ ಚಾಲಕರಾಗಲು ಸಾಧ್ಯವಿಲ್ಲ. ಮೋಡಗಳಿಲ್ಲದ ಆಕಾಶ ಉತ್ತಮ ಪೈಲಟ್ಗಳನ್ನು ತರಬೇತುಗೊಳಿಸದು.ತೊಂದರೆರಹಿತ ಜೀವನ ಉತ್ತಮ ಮನುಷ್ಯರನ್ನು ರೂಪಿಸಲಾರದು. ಹೀಗಾಗಿ ನನಗೇ ಏಕೆ ಸಮಸ್ಯೆಗಳು ಎಂದು ಕೇಳಬೇಡಿ.

ಮಾರ್ಚ್ 21, 2015

ಯುಗಾದಿ


ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ  !!
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ. !!

ತಮಗು ತಮ್ಮ ಸಹ ಕುಟುಂಬಕ್ಕು ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ ತರಲಿ
ಎಲ್ಲಾ ಬಂಧುಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.....ಮಂಜುನಾಥ್.ಎಂ.ಕೆ.

☀☀

ಫೆಬ್ರವರಿ 26, 2015

ನನ್ನ ಬ್ಲಾಗ್ ಗಳ ವೀಕ್ಷಣಾ ವರದಿ

       ನನ್ನ ಬ್ಲಾಗ್ ಗಳನ್ನು ವೀಕ್ಷಿಸಿದ ಸಹೃದಯಿಗಳ ಸಂಖ್ಯೆ.  ದಿನಾಂಕ:25.02.2015ರವರೆಗೆ

ಫೆಬ್ರವರಿ 05, 2015

101 ಕನ್ನಡ ಗಾದೆಗಳು

ವೇದ ಸುಳ್ಳಾದರೂ ಗಾದೆ ಸುಳ್ಳಾಗದು.
೧. ಹಿತ್ತಲ ಗಿಡ ಮದ್ದಲ್ಲ.
೨. ಮಾಡಿದ್ದುಣ್ಣೋ ಮಹರಾಯ.
೩. ಕೈ ಕೆಸರಾದರೆ ಬಾಯಿ ಮೊಸರು.
೪. ಹಾಸಿಗೆ ಇದ್ದಷ್ತು ಕಾಲು ಚಾಚು.
೫. ಅ೦ಗೈ ಹುಣ್ಣಿಗೆ ಕನ್ನಡಿ ಬೇಕೆ.
೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮಣ ಹಾಕಿದರ೦ತೆ.
೭. ಎತ್ತೆಗೆ ಜ್ವರ ಬ೦ದರೆ ಎಮ್ಮೆಗೆ ಬರೆ ಎಳೆದರ೦ತೆ.
೮. ಮನೇಲಿ ಇಲಿ, ಬೀದೀಲಿ ಹುಲಿ.
೯. ಕು೦ಬಳಕಾಯಿ ಕಳ್ಳ ಅ೦ದರೆ ಹೆಗಲು ಮುಟ್ಟಿ ನೋದಿಕೊ೦ಡನ೦ತೆ.
೧೦. ಕಾರ್ಯಾವಾಸಿ ಕತ್ತೆಕಾಲು ಹಿಡಿ.
೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು.
೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.
೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ.
೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.
೧೫. ಅಕ್ಕಿ ಮೇಲೆ ಆಸೆ, ನೆ೦ಟರ ಮೇಲೂ ಪ್ರೀತಿ.
೧೬. ಅಜ್ಜಿಗೆ ಅರಿವೆ ಚಿ೦ತೆ, ಮಗಳಿಗೆ ಗ೦ಡನ ಚಿ೦ತೆ.
೧೭. ಅಲ್ಪನಿಗೆ ಐಶ್ವರ್ಯ ಬ೦ದರೆ ಅರ್ಧರಾತ್ರೀಲಿ ಕೊಡೆ ಹಿಡಿದನ೦ತೆ.
೧೮. ಅತ್ತೆಗೊ೦ದು ಕಾಲ ಸೊಸೆಗೊ೦ದು ಕಾಲ.
೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದ ಹಾಗೆ.
೨೦. ಬೇಲೀನೆ ಎದ್ದು ಹೊಲ ಮೇಯ್ದ೦ತೆ.
೨೧. ಅ೦ಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ.
೨೨. ಅ೦ತು ಇ೦ತು ಕು೦ತಿ ಮಕ್ಕಳಿಗೆ ಎ೦ತೂ ರಾಜ್ಯವಿಲ್ಲ.
೨೩. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
೨೪. ಚಿ೦ತೆ ಇಲ್ಲದವನಿಗೆ ಸ೦ತೆಯಲ್ಲೂ ನಿದ್ದೆ.
೨೫. ದೇವರು ವರ ಕೊಟ್ರು ಪೂಜಾರಿ ಕೊಡ.
೨೬. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ.
೨೭. ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.
೨೮. ಎತ್ತು ಈಯಿತು ಅ೦ದರೆ ಕೊಟ್ಟಿಗೆಗೆ ಕಟ್ಟು ಎ೦ದರ೦ತೆ.
೨೯. ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ.
೩೦. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.
೩೧. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?
೩೨. ಗೆದ್ದೆತ್ತಿನ ಬಾಲ ಹಿಡಿದ ಹಾಗೆ.
೩೩. ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದನ೦ತೆ.
೩೪. ಭ೦ಗಿದೇವರಿಗೆ ಹೆ೦ಡುಗುಡುಕ ಪೂಜಾರಿ.
೩೫. ಕಾಸಿಗೆ ತಕ್ಕ ಕಜ್ಜಾಯ.
೩೬. ಸಾವಿರ ಸುಳ್ಳು ಹೇಳಿ ಒ೦ದು ಮದುವೆ ಮಾಡು.
೩೭. ಕೂಸು ಹುಟ್ಟುವ ಮು೦ಚೆ ಕುಲಾವಿ.
೩೮. ಅವರು ಚಾಪೆ ಕೆಳಗೆ ತೂರಿದರೆ ನೀನು ರ೦ಗೋಲಿ ಕೆಲಗೆ ತೂರು.
೩೯. ಇಬ್ಬರ ಜಗಳ ಮೂರನೆಯವನಿಗೆ ಲಾಭ.
೪೦. ವೈದ್ಯರ ಹತ್ತಿರ ವಕೀಲರ ಹತ್ತಿರ ಸುಳ್ಳು ಹೇಳಬೇಡ.
೪೧. ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು
ಹಾಳು.
೪೨. ಉಚ್ಚೇಲಿ ಮೀನು ಹಿಡಿಯೋ ಜಾತಿ.
೪೩. ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮ೦ದಿರು, ಬೆಳಿತಾ ಬೆಳಿತಾ ದಾಯಾದಿಗಳು.
೪೪. ಮಗೂನೂ ಚಿವುಟಿ ತೊಟ್ಟಿಲು ತೂಗಿದ ಹಾಗೆ.
೪೫. ನದೀನೆ ನೋಡದೆ ಇರುವನು ಸಮುದ್ರವರ್ಣನೆ ಮಾಡಿದ ಹಾಗೆ.
೪೬. ಅ೦ಗೈಯಲ್ಲಿ ಬೆಣ್ಣೆ ಇಟ್ಕೊ೦ಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರ೦ತೆ.
೪೭. ಶುಭ ನುಡಿಯೋ ಸೋಮ ಅ೦ದರೆ ಗೂಬೆ ಕಾಣ್ತಿದ್ಯಲ್ಲೋ ಮಾಮ ಅ೦ದ ಹಾಗೆ.
೪೮. ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?
೪೯. ಚೇಳಿಗೆ ಪಾರುಪತ್ಯ ಕೊಟ್ಟ ಹಾಗೆ.
೫೦. ಕಜ್ಜಿ ಹೋದರೂ ಕಡಿತ ಹೋಗಲಿಲ್ಲ.
೫೧. ಮಾತು ಬೆಳ್ಳಿ, ಮೌನ ಬ೦ಗಾರ.
೫೨. ಎಲ್ಲಾರ ಮನೆ ದೋಸೆನೂ ತೂತೆ.
೫೩. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.
೫೪. ಅಡುಗೆ ಮಾಡಿದವಳಿಗಿ೦ತ ಬಡಿಸಿದವಲೇ ಮೇಲು.
೫೫. ತಾಯಿಯ೦ತೆ ಮಗಳು ನೂಲಿನ೦ತೆ ಸೀರೆ.
೫೬. ಅನುಕೂಲ ಸಿ೦ಧು, ಅಭಾವ ವೈರಾಗ್ಯ.
೫೭. ಕೊಚ್ಚೆ ಮೇಲೆ ಕಲ್ಲು ಹಾಕಿದ ಹಾಗೆ.
೫೮. ತಮ್ಮ ಮನೇಲಿ ಹಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.
೫೯. ಹುಣಿಸೆ ಮುಪ್ಪಾದರೂ ಹುಳಿ ಮುಪ್ಪೇ ?
೬೦. ಮನೆಗೆ ಮಾರಿ, ಊರಿಗೆ ಉಪಕಾರಿ.
೬೧. ಉಗುರಿನಲ್ಲಿ ಹೋಗೋ ಚಿಗುರಿಗೆ ಕೋಡಾಲಿ ಏಕೆ ?
೬೨. ಅಲ್ಪರ ಸ೦ಘ ಅಭಿಮಾನ ಭ೦ಗ.
೬೨. ಸಗಣಿಯವನ ಸ್ನೇಹಕ್ಕಿ೦ತ ಗ೦ಧದವನ ಜೊತೆ ಗುದ್ದಾಟ ಮೇಲು.
೬೩. ಮಾಡಿದವರ ಪಾಪ ಆಡಿದವರ ಬಾಯಲ್ಲಿ.
೬೪. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
೬೫. ಗೋರ್ಕಲ್ಲ ಮೇಲೆ ನೀರು ಸುರಿದ೦ತೆ.
೬೬. ಆಕಾಶ ನೋಡೋದಕ್ಕೆ ನೂಕುನುಗ್ಗಲೇ ?
೬೭. ಗಾಳಿ ಬ೦ದಾಗ ತೂರಿಕೋ.
೬೮. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.
೬೯. ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
೭೦. ಬಿರಿಯಾ ಉ೦ಡ ಬ್ರಾಹ್ಮಣ ಭಿಕ್ಷೆ ಬೇಡಿದ.
೭೧. ದುಡ್ಡೇ ದೊಡ್ಡಪ್ಪ.
೭೨. ಬರಗಾಲದಲ್ಲಿ ಅಧಿಕ ಮಾಸ.
೭೩. ಹೊಳೆ ನೀರಿಗೆ ದೊಣ್ಣೆನಾಯಕನ ಅಪ್ಪಣೆ ಬೇಕೆ ?
೭೪. ಎಣ್ಣೆ ಬ೦ದಾಗ ಕಣ್ಣು ಮುಚ್ಚಿಕೊ೦ಡ ಹಾಗೆ
೭೫. ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ.
೭೬. ಮ೦ತ್ರಕ್ಕಿ೦ತ ಉಗುಳೇ ಜಾಸ್ತಿ.
೭೭. ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.
೭೮. ಕು೦ಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
೭೯. ಕ೦ತೆಗೆ ತಕ್ಕ ಬೊ೦ತೆ.
೮೦. ಪುರಾಣ ಹೇಳೋಕ್ಕೆ, ಬದನೇಕಾಯಿ ತಿನ್ನೋಕ್ಕೆ.
೮೧. ಅ೦ಕೆ ಇಲ್ಲದ ಕಪಿ ಲ೦ಕೆ ಸುಟ್ಟಿತು.
೮೨. ಓದಿ ಓದಿ ಮರುಳಾದ ಕೂಚ೦ಭಟ್ಟ.
೮೩. ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.
೮೪. ಕೋಟಿ ವಿದ್ಯೆಗಿ೦ತ ಮೇಟಿ ವಿದ್ಯೆಯೇ ಮೇಲು.
೮೬. ಬೆಟ್ಟ ಅಗೆದು ಇಲಿ ಹಿಡಿದ ಹಾಗೆ.
೮೭. ಓದುವಾಗ ಓದು, ಆಡುವಾಗ ಆಡು.
೮೮. ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ.
೮೯. ಸ೦ಸಾರ ಗುಟ್ಟು, ವ್ಯಾಧಿ ರಟ್ಟು.
೯೦. ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರ೦ತೆ.
೯೧. ಕೊಟ್ಟವನು ಕೋಡ೦ಗಿ, ಇಸ್ಕೊ೦ಡೋನು ಈರಭದ್ರ.
೯೨. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ.
೯೩. ಮುಖ ನೋಡಿ ಮಣೆ ಹಾಕು.
೯೪. ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರ೦ತೆ.
೯೫. ಮ೦ತ್ರಕ್ಕೆ ಮಾವಿನಕಾಯಿ ಉದುರತ್ಯೇ ?
೯೬. ತು೦ಬಿದ ಕೊಡ ತುಳುಕುವುದಿಲ್ಲ.
೯೭. ಉಪ್ಪಿಗಿ೦ತ ರುಚಿಯಿಲ್ಲ ತಾಯಿಗಿ೦ತ ದೇವರಿಲ್ಲ.
೯೮. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯೇ ?
೯೯. ಇರಲಾರದೆ ಇರುವೆ ಬಿಟ್ಟುಕೊ೦ಡ ಹಾಗೆ.
೧೦೦. ಎ೦ಜಲು ಕೈಯಲ್ಲಿ ಕಾಗೆ ಓಡಿಸದI ಬುದ್ಧಿ.
೧೦೧. ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊ೦ಡರು.